ಬೀದರ – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಶತಾಯುಷಿ ಭೀಮಣ್ಣ ಖಂಡ್ರೆ (೧೦೨) ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ
ರಾಜ್ಯದ ಪ್ರಭಾವಿ ಸಚಿವ ಈಶ್ವರ್ ಖಂಡ್ರೆ ಅವರ ತಂದೆಯಾಗಿರುವ ಭೀಮಣ್ಣ ಖಂಡ್ರೆ ಹಲವು ದಿನಗಳಿಂದ ಬೀದರ್ ನಗರದ ಗುದಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ನಾಲ್ಕು ದಿನಗಳ ಹಿಂದೆ ಮನೆಗೆ ಕರೆ ತಂದು ಚಿಕಿತ್ಸೆ ಮುಂದುವರಿಸಲಾಗಿತ್ತು. ರಾತ್ರಿ ೧೧ ರ ಸುಮಾರಿಗೆ ಕೊನೆ ಉಸಿರೆಳೆದ ಭೀಮಣ್ಣ ಖಂಡ್ರೆ
ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದ ಭೀಮಣ್ಣ ಖಂಡ್ರೆ ೪ ಬಾರಿ ಶಾಸಕರು, ೨ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ರಾಜ್ಯದ ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಖಂಡ್ರೆಯವರು ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ೪ ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ೧೯೬೨,೧೯೬೭, ೧೯೭೮ ಮತ್ತು ೧೯೮೩ ರಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿ ೧೯೯೨ರಲ್ಲಿ ಮೊಯ್ಲಿ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಸಾರಿಗೆ ಸಚಿವರಾಗಿದ್ದರು. ಸಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಭೀಮಣ್ಣ ಖಂಡ್ರೆ ನಂತರ ೧೯೮೮ ರಲ್ಲಿ ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ರು ತಂದೆ ಶಿವಲಿಂಗಪ್ಪ ಖಂಡ್ರೆ, ತಾಯಿ ಪಾರ್ವತಿಭಾಯಿ ಖಂಡ್ರೆಯವರ ಪುತ್ರ ಭೀಮಣ್ಣ ಖಂಡ್ರೆ.
ಭೀಮಣ್ಣ ಖಂಡ್ರೆ ಜನನ: ಹುಲಸೂರು ತಾಲೂಕಿನ ಗೊರ್ಟಾ(ಬಿ) ಗ್ರಾಮ. ಜನವರಿ ೮, ೧೯೨೩ ರಂದು ಜನನ.ಮೂವರು ಪುತ್ರರು, ಐದು ಜನ ಪುತ್ರಿಯವರನ್ನು ಹೊಂದಿದ್ದ ಭೀಮಣ್ಣ ಖಂಡ್ರೆ
ವರದಿ : ನಂದಕುಮಾರ ಕರಂಜೆ, ಬೀದರ

