- Advertisement -
ಸಿಂದಗಿ: ಪಟ್ಟಣದ ಬೈಪಾಸ ರಸ್ತೆಯ ಗೋಲಗೇರಿ ಕ್ರಾಸನಲ್ಲಿರುವ ಶಿವಾನಿ ಹೋಟೇಲ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-6.120 ಲೀ ಮದ್ಯ ಹಾಗೂ ಒಟ್ಟು-21.490 ಲೀ ಬೀಯರ ಜಪ್ತಿ ಪಡಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ರವರು ಪ್ರಕರಣವನ್ನು ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ತಾಲೂಕ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ಕಂದಾಯ ನಿರೀಕ್ಷಕ ಇಮಾಮಕಾಶೀಮ.ಎ.ಮಕಾನದಾರ ಹಾಗೂ ಆಹಾರ ಇಲಾಖೆಯ ಶಿರಸ್ತೇದಾರ ರವಿಕುಮಾರ ವಿಠ್ಠಲ ರಾಠೋಡ ಹಾಗೂ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ಅವರು ಕೂಡಿಕೊಂಡು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ದಾಳಿಯಲ್ಲಿ ಸಿಬ್ಬಂದಿಯಾದ ಎಮ್.ಜೆ.ಮೊಕಾಶಿ ಅಬಕಾರಿ ಪೇದೆ ಹಾಗೂ ಪೋಲಿಸ್ ಸಿಬ್ಬಂದಿಗಳಾದ ಭಗವಂತ್ರಾಯ ಮುಳಸಾವಳಗಿ ಪೋಲಿಸ್ ಪೇದೆ, ಮೈಬೂಬ ಮುಲ್ಲಾ ಪೋಲಿಸ್ ಪೇದೆ ರವರು ಹಾಜರಿದ್ದರು.