ಬೆಳಗಾವಿ – ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವದ ವರ್ಷಾಚರಣೆ ವಚನ ಸಂಶೋಧಕ ಪಿತಾಮಹ ಫ. ಗು.ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ಇವರ ಆಶ್ರಯದಲ್ಲಿ 82ನೇಯ ವಚನೋತ್ಸವ ಕಾರ್ಯಕ್ರಮ ಪತ್ರಿ ಬಸವ ನಗರದ ಮೂರನೇ ಅಡ್ಡರಸ್ತೆಯ ಲಿಂಗೈಕ್ಯ ಶರಣೆ ಮುಹಾನಂದಾ ವೀರಭದ್ರಪ್ಪ ಕಾಪಸೆ ಅವರ ಮನೆಯಲ್ಲಿ ನೆರವೇರಿತು.
ಅಲ್ಲಮಪ್ರಭುಗಳ ಪೃಥ್ವಿಗೆ ಹುಟ್ಟಿದ ಶಿಲೆ ಎಂಬ ವಚನ ಕುರಿತು ಪ್ರೇಮಕ್ಕ ಅಂಗಡಿ ಚಿಂತನೆಗೈದರು. ಶರಣ ವೀರಭದ್ರಪ್ಪ ಕಾಪಸಿ ಧ್ವಜಾರೋಹಣ ಮಾಡಿದರು.
ವೀಣಾ ಮಹಾಂತೇಶ ಕಾಪಸೆ ದಂಪತಿಗಳು ಬಸವ ಪೂಜೆ ನೆರವೇರಿಸಿದರು ಬಂಧುಗಳ ನೆಂಟರು ಬಂಧು ಬಳಗ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು ಮುಕ್ತಾಯಕ್ಕ ಬಳಗದ ಶರಣೆ ಗೀತಾ ಅರಳಿಕಟ್ಟಿ ಪ್ರಾರ್ಥಿಸಿದರು. ಅನುರಾಗ ಕರಡಿಗುದ್ದಿ ನಿರೂಪಿಸಿದರು ರಾಜೇಶ್ವರಿ ದ್ಯಾಮನಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು ಅಜಗನ್ನ ಮುಕ್ತಾಯಕ್ಕ ಬಳಗದ ಕದಳಿ ಮಹಿಳಾ ವೇದಿಕೆ ಪತ್ರಿ ಬಸವನಗರದ ಶರಣ ಶರಣಿಯರು ಹಾಜರಿದ್ದರು. ಮುಕ್ತಾಯಕ್ಕ ಬಳಗದವರು ಬಸವ ಮಂತ್ರ ಪಠಣ ನೆರವೇರಿಸಿ ಕೊಟ್ಟರು ಹಾಗೂ ನಗರದ ನೂರಾರು ಶರಣ ಶರಣೀಯರೂ ಉಪಸ್ಥಿತರಿದ್ದರು.