ಬೆಳಗಾವಿ – ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ ಪ್ರಭಾರಿ ಮುಖ್ಯೋಪಾಧ್ಯಾಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುರೇಶ ಸಿ ಹಂಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಅತಿಥಿಗಳಾಗಿ ಕೆಂಪಣ್ಣ ಬ ಕಮತಿ ಹಾಗೂ ಕೋಲಕಾರ ಸರ್ ಪ್ರಧಾನ ಗುರುಗಳು ಸ ಹಿ ಪ್ರಾ ಶಾಲೆ ಹೊಸ ಇದ್ದಲಹೊಂಡ ಇವರು ಆಗಮಿಸಿದ್ದರು.
ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮವನ್ನು ಎನ್ ಎಂ ನಂದಿಹಳ್ಳಿ ಸಮಾಜ ಶಿಕ್ಷಕರು ಹಾಗೂ ಶ್ರೀಮತಿ ಎಂ ಪಿ ದೊಡ್ಡಮನಿ ಚಿತ್ರ ಕಲಾ ಶಿಕ್ಷಕಿಯರು ನೆರವೇರಿಸಿದರು.
ವರ್ಗಾವಣೆಗೊಂಡ ಶಿಕ್ಷಕರಾದ ವಿ. ಎಸ್ ಬೀಳಗಿ ಪ್ರಧಾನ ಗುರುಗಳು ಹಾಗೂ ಆರ್ ಹೆಚ್ ಮಡಿಗಾರ ವಿಜ್ಞಾನ ಶಿಕ್ಷಕಿಯರು ಇವರನ್ನು ಶಾಲೆಯ ಪರವಾಗಿ ಶ್ರೀಮತಿ ಜಿ ಬಿ ಸುಗತೆ ಹಾಗೂ ಎಸ್ ಎಸ್ ಮುಚ್ಚಂಡಿ, ಶ್ರೀಮತಿ ಸುಜಾತಾ ಕೇರಿಮನಿ, ಎನ್ ಎಂ ನಂದಿಹಳ್ಳಿ, ಶ್ರೀಮತಿ ಎಮ್ ಪಿ ದೊಡ್ಡಮನಿ, ಶ್ರೀಮತಿ ಎಸ್ ಡಿ ಮೇತ್ರಿ, ಶ್ರೀಮತಿ ಎಸ್ ಆರ್ ನದಾಫ, ಎ ಬಿ ಹವಾಲ್ದಾರ್ ಹಾಗು ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ ಸಿ ಹಂಜಿ ಹಾಗೂ ಸದಸ್ಯರಾದ ಕೆಂಪಣ್ಣ ಕಮತಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಕೂಡಿ ಗೌರವಿಸಿ ಸನ್ಮಾನಿಸಲಾಯಿತು.
ಸುರೇಶ ಸಿ ಹಂಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾ ಬೆಳಗಾವಿ ಇವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಎಸ್ ಆರ್ ಮರೇದ ಅವರು ನಿರ್ವಹಿಸಿದರು ವಂದನಾರ್ಪಣೆಯನ್ನು ಶ್ರೀಮತಿ ಸುಜಾತಾ ಕೇರಿಮನಿ ನಡೆಯಿಸಿ ಕೊಟ್ಟರು.