ಬೀದರ: ಸಹಕಾರಿ ಸಂಘ ಅಲ್ಲದೆ ಖಾಸಗಿಯವರ ಕಡೆ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ತರನಳ್ಳಿಯಲ್ಲಿ ನಡೆದಿದೆ.
ಸಂಗಪ್ಪ ಮಳಚಾಪೂರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾದ ರೈತ ಎನ್ನಲಾಗಿದೆ.
ಅಧಿಕಾರಿಗಳು, ರಾಜಕಾರಣಿಗಳು ವಿಧಾನ ಸಭಾ ಚುನಾವಣೆಯಲ್ಲಿ ಫುಲ್ ಬಿಜಿಯಾಗಿದ್ದು ರೈತನ ಬವಣೆಯನ್ನು ಯಾರೂ ಆಲಿಸಲಿಲ್ಲ ಎನ್ನಲಾಗಿದ್ದು ಮನನೊಂದ ರೈತ ನೇಣಿಗೆ ಶರಣಾಗಿದ್ದಾನೆ ಅಲ್ಲದೆ ಅಕಾಲಿಕ ಮಳೆ ಬಿದ್ದು ರೈತನ ಜೋಳ, ಉಳ್ಳಾಗಡ್ಡಿ ಬೆಳೆ ಹಾಳಾಗಿತ್ತು. ವಿವಿಧೆಡೆ ಖಾಸಗಿ ಸಾಲ ಮಾಡಿಕೊಂಡಿದ್ದ ಸಂಗಪ್ಪ ಮಳಚಾಪೂರೆ ಸಾಲಗಾರರ ಕಾಟದಿಂದ ಬೇಸತ್ತು ಹೋಗಿದ್ದ ಎನ್ನಲಾಗಿದೆ.
ಸಹಕಾರ ಸಂಸ್ಥೆ ಸೇರಿ ವಿವಿದ ಕಡೆ ಸಾಲ ಮಾಡಿಕೊಂಡಿದ್ದ.
ಈ ಮಧ್ಯೆ ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದರಿಂದ ಅಧಿಕಾರಿಗಳ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಭಾಲ್ಕಿ ತಾಲ್ಲೂಕಿನ ದನ್ನೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ