spot_img
spot_img

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Must Read

spot_img
- Advertisement -

ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಸಹಾಯವನ್ನು ಪಡೆದುಕೊಂಡು ಕೃಷಿರಂಗದ ಅಭಿವೃದ್ಧಿಗಾಗಿ ಬಳಸಿಕೊಂಡು ಈ ದೇಶದ ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆಂದು ಸಂಸ್ಥಾಪಕ ಅಧ್ಯಕ್ಷ, ಸಂಸದ ಈರಣ್ಣ ಕಡಾಡಿ ಸಹಕಾರಿಗಳನ್ನು ಬಣ್ಣಿಸಿದರು.

ಸಮೀಪದ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.ಕಲ್ಲೋಳಿ ಇದರ ಸನ್ 2020-21 ನೇ ಸಾಲಿನ 19ನೇ ಸರ್ವ ಸಾಮಾನ್ಯ ಸಭೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಪ್ರಸಕ್ತ ರೂ-60.53 ಲಕ್ಷ ಲಾಭಗಳಿಸಿದೆ.

ಮುಂಬರುವ ಶೈಕ್ಷಣಿಕ ವರ್ಷಕ್ಕೆ ನಮ್ಮ ಸಹಕಾರಿಯ ಆಯ್ದ 5 ಮಕ್ಕಳಿಗೆ ತಲಾ ರೂ 5000 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಹಕಾರಿ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

- Advertisement -

ಸಹಕಾರಿಯ ಎಲ್ಲ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ಘೋಷಿಸಿದ ಅವರು ಸಂಘವು ಸ್ವಂತ ಕಟ್ಟಡ ಹೊಂದಿ, 4681 ಸದಸ್ಯರ ರೂ-12.75 ಲಕ್ಷ ಶೇರ ಬಂಡವಾಳ, ಗ್ರಾಹಕರಿಂದ ರೂ-18.17 ಕೋಟಿ ಠೇವಣಿ ಹೊಂದಿದ್ದು, ರೂ-3.22 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಎಂದರಲ್ಲದೇ ಗ್ರಾಹಕರಿಗೆ ರೂ-19.60 ಕೋಟಿ ವಿವಿಧ ಸಾಲ ವಿತರಿಸಲಾಗಿದೆ ಎಂದರು.

ದಿ.ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ, ಭಾರತದ ಮಣ್ಣಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದ ಸಹಕಾರ ಗುಣ ಭಾರತದ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಿ ಬೆಳೆದಿದೆ,ಸಹಕಾರಿಗಳ ಆರ್ಥಿಕ ಮಟ್ಟ ಸುಧಾರಿಸಲು ಸಂಸ್ಥೆ ಬದ್ದವಾಗಿದೆ ಎಂದರು.

ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೊಸಬಾಳ, ನಿರ್ದೆಶಕರಾದ ಶ್ರೀಶೈಲ ತುಪ್ಪದ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ವ್ಯಾಪಾರಿ, ಮಾರುತಿ ಮಕ್ಕಳಗೇರಿ, ಮ್ಲಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ ಉಪಸ್ಥಿತರಿದ್ದರು.

- Advertisement -

ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಈರಪ್ಪ ದೇಯನ್ನವರ, ಉಪಾಧ್ಯಕ್ಷರಾದ ಮಾಯಪ್ಪ ಬಾಣಸಿ, ಶ್ರೀಕಾಂತ ಕರೆಪ್ಪಗೋಳ, ಬಸಪ್ಪ ಗೌಡರ,ಬಾಳಪ್ಪ ತಡಸಿ,ವಿಠ್ಠಲ ಕೋಣಿ,ಮಹಾದೇವ ಸವತಿಕಾಯಿ ಭಾಗವಹಿಸಿದ್ದರು.

ಸಹಕಾರಿಯ ಪ್ರಮುಖ ಗ್ರಾಹಕರಾದ ಮಲ್ಲಪ್ಪ ಖಾನಗೌಡ್ರ, ವಕೀಲ ಮಲ್ಲಪ್ಪ ಕಡಾಡಿ, ಶಿವರುದ್ರಪ್ಪ ಬಿ.ಪಾಟೀಲ, ಮಲ್ಲಪ್ಪ ಕುರಬೇಟ, ಪರಪ್ಪ ಕಡಾಡಿ, ಅಡಿವೇಪ್ಪ ಕುರಬೇಟ ಮುಂತಾದವರು ಭಾಗವಹಿಸಿದರು.

ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸ್ವಾಗತಿಸಿದರು, ಲೆಕ್ಕಾಧಿಕಾರಿ ಶಂಕರ ಕೌಜಲಗಿ ವಾರ್ಷಿಕ ವರದಿ ಓದಿದರು, ಪ್ರಶಾಂತ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ವಿಠ್ಠಲ ಜೆಟ್ಟೆನ್ನವರ ವಂದಿಸಿದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group