spot_img
spot_img

ಶಾಸಕರ ಮಾದರಿ ಶಾಲೆ ಗುರ್ಲಹೊಸೂರನಲ್ಲಿ ಸಂವಿಧಾನ ದಿನದ ಆಚರಣೆ

Must Read

ಸವದತ್ತಿ: ಪಟ್ಟಣದ ಗುರ್ಲಹೂಸೂರಿನ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯ ನಿಮಿತ್ತ ಇಂದು ಪ್ರಾರ್ಥನಾ ಸಮಯದಲ್ಲಿ ದೈಹಿಕ ಶಿಕ್ಷಕರಾದ ದೊಡಮನಿ ಇವರು ಕನ್ನಡದಲ್ಲಿ ಮತ್ತು ದೊಡ್ಡಕಲ್ಲನ್ನವರ ಶಿಕ್ಷಕರು ಆಂಗ್ಲಭಾಷೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ೧೧:೦೦ ಗಂಟೆಗೆ ಪ್ರಸಾರವಾದ ಸಂವಿಧಾನ ದಿನದ ಕಾರ್ಯಕ್ರಮವನ್ನು ಸ್ಮಾರ್ಟ ಕ್ಲಾಸ್ ನಲ್ಲಿ ಮಕ್ಕಳಿಗೆ ತೋರಿಸಿ ವರದಿ ಮಾಡಲು ತಿಳಿಸಲಾಯಿತು.ಸಾಯಂಕಾಲ ಅವಧಿಯಲ್ಲಿ ಸಂವಿಧಾನ ದಿನದ ಕುರಿತು ಶಾಲೆಯ ಸಾಕಷ್ಟು ಮಕ್ಕಳು ಆಸಕ್ತಿಯಿಂದ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವಾಯ್ ಬಿ ಕಡಕೋಳ,ಗುರ್ಲಹೊಸೂರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರಪ್ಪ ಉಪಸ್ಥಿತರಿದ್ದರು.

ಸಹಶಿಕ್ಷಕರಾದ ಪಿ. ಎಸ್ ಸಿಂಧೆಯವರು ಈ ದಿನದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಅತಿಥಿಗಳಾದ ರಾಮಚಂದ್ರಪ್ಪನವರು ಸಂವಿಧಾನದ ಹಿನ್ನೆಲೆ ಕುರಿತು ಮಾತನಾಡಿದರು.

ನಂತರ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷತಾ ಹುಲಮನಿ(ಪ್ರಥಮ),ಅನನ್ಯ ಹಂಚಾಟೆ (ದ್ವಿತೀಯ), ಅನ್ನಪೂರ್ಣ ಜಾಬನ್ನವರ (ತೃತೀಯ) ,ಸುಸ್ಮಾ ವಣ್ಣೂರ(ಸಮಾಧಾನಕರ) ಹಾಗೂ ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮದ ಸಾರಾಂಶವನ್ನು ವರದಿ ಮಾಡಿದ ಸೌಮ್ಯ ಹುಂಡನವರ ಇವರಿಗೆ ಮುಖ್ಯ ಅತಿಥಿಗಳಾದ ವಾಯ್ ಬಿ ಕಡಕೋಳ ಬಹುಮಾನ ವಿತರಿಸಿದರು.

ಸಭೆಯ ಅಧ್ಯಕ್ಷರಾದ ಪದವೀಧರ ಪ್ರಧಾನ ಗುರುಗಳಾದ ಎಮ್ ಬಿ ಕಮ್ಮಾರ “ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಕುರಿತು” ಮಾತನಾಡಿ, “ಅವುಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ ನಿರ್ಮಾಣದಲ್ಲಿ ಪಾಲ್ಗೊಳ್ಳಲು ಸನ್ನದ್ಧರಾಗಬೇಕೆಂದು” ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕರಾದ ಎಸ್ ಹೆಚ್ ಕರಿಗಾರ,ಎಮ್ ಜಿ ದೊಡಮನಿ,ಪಿ ಎಸ್ ಶಿಂಧೆ,ಎಮ್ ಎಮ್ ಮಾಟೋಳ್ಳಿ, ಬಿ ಎನ್ ದೊಡ್ಡಕಲ್ಲನ್ನವರ ಹಾಗೂ ಶಿಕ್ಷಕಿಯರಾದ ಶ್ರೀಮತಿ ಜಿ ಸಿ ಗುಂಡಾರ,ಎಸ್ ಎಸ್ ಮಿರ್ಜಿ,ಜಿ ಕೆ ಕೆಂಪಯ್ಯನವರ,ಬಿ ಕೆ ಸಂತಿ,ಎನ್ ಆರ್ ಯಕ್ಕುಂಡಿ ಹಾಗೂ ವ್ಹಿ ಆರ್ ಗೊರಗುದ್ದಿ ಶ್ರೀಮತಿ ಎನ್.ಆರ್.ಜಂಬೂನವರ ಹಾಜರಿದ್ದರು.ಮಾಟೊಳ್ಳಿಯವರು ನಿರೂಪಿಸಿದರು ಹಾಗೂ ಗೊರಗುದ್ದಿ ಶಿಕ್ಷಕಿಯರು ವಂದನಾರ್ಪಣೆ ಮಾಡಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!