spot_img
spot_img

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Must Read

spot_img
- Advertisement -

ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಸನ್ 2024-25 ನೆಯ ಸಾಲಿನ ಶಾಲಾ ಸಂಸತ್ ಚುನಾವಣೆ ವಿಶಿಷ್ಟ ರೀತಿಯಲ್ಲಿ ನಡೆಯಿತು.

ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ನೈಜ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಚಿಹ್ನೆಗಳ ಹಂಚಿಕೆ, ಪ್ರಚಾರ, ಮತದಾನ, ಮತ ಎಣಿಕೆ ಹೀಗೆ ಎಲ್ಲ ಹಂತಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ವಿದ್ಯಾರ್ಥಿಗಳನ್ನೇ ಚುನಾವಣಾ ಸಿಬ್ಬಂದಿಯನ್ನಾಗಿಸಿ ತರಬೇತಿ ನೀಡಿ ಕರ್ತವ್ಯ ನಿರ್ವಹಿಸುವಂತೆ ತಯಾರಿ ಮಾಡಲಾಗಿತ್ತು. ಪಿಆರ್‌ಒ ಪೃಥ್ವಿ ಗರಗದ, ಎಪಿಆರ್‌ಒ ಸುಶ್ಮಿತಾ ಸೊಗಲದ, ಪಿಒ ಸ್ಪೂರ್ತಿ ಕುಲಕರ್ಣಿ, ಲಕ್ಷ್ಮೀ ಇಂಚಲ, ಪೋಲಿಸ್ ಸಿಬ್ಬಂದಿಗಳಾಗಿ ಮಲ್ಲಪ್ಪ ದಳವಾಯಿ, ಪ್ರೀತಂ ಸೂರ್ಯವಂಶಿ, ಸೀಮಾ ಹೊಸೂರ, ಸುಕನ್ಯಾ ಹೊಸೂರ, ಚುನಾವಣಾ ಏಜೆಂಟ್‌ರಾಗಿ ಬಸವರಾಜ ಗರಗದ, ಬಸವರಾಜ ಯರಗೊಪ್ಪ, ಲಕ್ಷ್ಮೀ ಶೀಗಿಹಳ್ಳಿ, ಲಕ್ಷ್ಮೀ ಶೀಗಿಹಳ್ಳಿಮಠ ಆಸಕ್ತಿ ಹಾಗೂ ಹುರುಪಿನಿಂದ ಕಾರ್ಯ ನಿರ್ವಹಿಸಿದರು. ಒಟ್ಟು 9 ಸ್ಥಾನಗಳಿಗೆ 28 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರಿಗೂ ಮತ ಚಲಾಯಿಸುವ ಅವಕಾಶ ನೀಡಲಾಗಿತ್ತು. ಒಟ್ಟೂ ಶೇ. 88.52 ರಷ್ಟು ಮತದಾನವಾಯಿತು.

- Advertisement -

ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿತ್ತು. ಫಲಿತಾಂಶ ಹೊರಬಿದ್ದಂತೆ ಗೆದ್ದ ಮಕ್ಕಳು ಖುಷಿಯಿಂದ ಸಂಭ್ರಮಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್.ಗುರುನಗೌಡರ, ಎಸ್.ವಿ.ಬಳಿಗಾರ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ಕುಮಾರ ಯರಗಂಬಳಿಮಠ, ಪ್ರಾಥಮಿಕ ಶಾಲೆಯ ಗುರುಗಳಾದ ದಾದಾಪೀರ ಬಾಗೇವಾಡಿ, ವಿ.ಎಂ.ಕುರಿ, ಕೃಷ್ಣೇಗೌಡ, ಶೋಭಾ ರೊಟ್ಟಿ, ಮುನವಳ್ಳಿಮಠ, ತಿಪ್ಪಣ್ಣ ಮಾದರ, ರುದ್ರಪ್ಪ ಚಚಡಿ, ಪ್ರಶಿಕ್ಷಣಾರ್ಥಿ ಪವಿತ್ರಾ ಸೊಗಲದ, ಅಡುಗೆ ಸಹಾಯಕರಾದ ಗಂಗವ್ವ ಅಳಗೋಡಿ, ಮಹಾದೇವಿ ಸೊಗಲದ, ವೀಣಾ ಶೀಗಿಹಳ್ಳಿ, ಪಾರವ್ವ ದಳವಾಯಿ, ಗಂಗವ್ವ ದೊಡವಾಡ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ, ಸಹಾಯಕ ಚುನಾವಣಾಧಿಕಾರಿಯಾಗಿ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕಿಯರಾದ ಮಂಜುಳಾ ಕಾಳಿ ಕಾರ್ಯ ನಿರ್ವಹಿಸಿದರು.

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group