spot_img
spot_img

ಜನಪದ ವಚನ ಸಾಹಿತ್ಯವು ವೈಚಾರಿಕತೆಯ ಕುರುಹುಗಳು: ಡಾ. ಪೋತರಾಜ

Must Read

spot_img

ಮೂಡಲಗಿ: ಅನಾದಿ ಕಾಲದಿಂದಲೂ ವಿಜ್ಞಾನ ಬಳಕೆಯಲ್ಲಿದ್ದು ಆಯಾ ಕಾಲಘಟ್ಟದಲ್ಲಿ ತನ್ನ ವಿಶಿಷ್ಟ ರೂಪತಾಳಿ ಮಹೋನ್ನತ ಕೊಡುಗೆ ನೀಡುತ್ತಾ ಬಂದಿರುವ ಕುರುಹುಗಳೇ  ನಮ್ಮ ಜನಪದ ಮತ್ತು ವಚನ ಸಾಹಿತ್ಯ ಹಾಗೆಯೇ ವಚನಕಾರರೇ ಸಮಾಜ ಪರಿವರ್ತನೆಯ ನಿಜ ಸಂಶೋಧಕ, ವಿಜ್ಞಾನಿಗಳೆಂದು ಉಪನ್ಯಾಸಕ,ಸಾಹಿತಿ, ಸಂಶೋಧಕ ಡಾ. ಮಹಾದೇವ ಪೋತರಾಜ ಅಭಿಪ್ರಾಯ ಪಟ್ಟರು.

ಅವರು ತಾಲ್ಲೂಕಿನ ಖಾನಟ್ಟಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮೂಡಲಗಿ ತಾಲೂಕಾ ಘಟಕದಿಂದ ಹಮ್ಮಿಕೊಂಡಿದ್ದ ಸಮಿತಿಯ “ಸಂಸ್ಥಾಪನಾ ದಿನಾಚರಣೆ ಮತ್ತು ಸದಸ್ಯತ್ವ ಅಭಿಯಾನ” ಸಮಾರಂಭದಲ್ಲಿ ಮಾತನಾಡಿದರು

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೂಡಲಗಿ ತಾಲೂಕಾ ಅಧ್ಯಕ್ಷ ಸಾಹಿತಿ  ಬಸವರಾಜ ಭಜಂತ್ರಿ  ಮಾತನಾಡಿ, ವಿಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಭೌತಿಕ ರೂಪದಲ್ಲಿರುವ ಪ್ರತಿಯೊಂದು ನಾವಿನ್ಯ ರೂಪದ ವಸ್ತುವೂ ವಿಜ್ಞಾನದ ಬಳುವಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಸಮಿತಿಯ ಧ್ಯೇಯೋದ್ದೇಶಗಳನ್ನು ವಿವರಿಸಿ ವಿಜ್ಞಾನ ಚಳವಳಿಯ ಹಿನ್ನೆಲೆಯನ್ನು ಮೆಲುಕು ಹಾಕಿದರು. 

ಸಮಾರಂಭದಲ್ಲಿ ವಿಜ್ಞಾನ ಶಿಕ್ಷಕರಾದ  ರಾಜು ಮರನೂರ ಅವರಿಂದ ಸದಸ್ಯತ್ವ ನಮೂನೆಯನ್ನು ಸ್ವೀಕಾರ ಮಾಡುವುದರ ಮೂಲಕ 2023 ನೇ ಸಾಲಿನ ವಿಶೇಷ ‘ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಖಾನಟ್ಟಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್.ಎಸ್.ಹುನ್ನೂರ ಮಾತನಾಡಿದರು.

ಸಮಾರಂಭದಲ್ಲಿ  ಶಿಕ್ಷಕ  ಪಿ.ಬಿ.ಕುಲಕರ್ಣಿ ಮತ್ತಿತರರು ಇದ್ದರು.

ವಿಜ್ಞಾನ ಶಿಕ್ಷಕರಾದ ನಾಗರಾಜ ಗಡಾದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸದರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!