spot_img
spot_img

ಪತ್ರಿಕಾರಂಗದ ವೃತ್ತಿ ಮುಳ್ಳಿನ ಹಾಸಿಗೆಯಿದ್ದಂತೆ – ಪವಿತ್ರಾ ಅಕ್ಕನವರು

Must Read

spot_img
- Advertisement -

ಸಿಂದಗಿ: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತ ಸಮಾಜದ ಆಗು ಹೋಗುಗಳಿಗೆ ಸದಾ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ವೃತ್ತಿ ಮುಳ್ಳಿನ ಹಾಸಿಗೆಯೇ ಸರಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿಂದಗಿಯ ಮುಖ್ಯ ಸಂಚಾಲಕರಾದ ಪವಿತ್ರಾ ಅಕ್ಕ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ನಿಮಿತ್ತ ಗುರುವಾರ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿ, ಸಾಕಷ್ಟು ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರ ನಡುವೆಯೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಕಾರಣಕ್ಕೆ ಸದಾ ದುಡಿಯುತ್ತಾರೆ. ಅಂತಹ ಪತ್ರಕರ್ತರನ್ನು ಗೌರವಿಸಿರುವುದು ಖುಷಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬೆನಕರಾಜ ಜೋಗುರ, ಟಿ.ಕೆ ಮಲಗೊಂಡ ಮಾತನಾಡಿ, ನಿತ್ಯ ಜೀವನದಲ್ಲಿ ದಿನಾ ಬೆಳಗಾದರೆ ಸಾಕು ಒಂದಿಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜಕ್ಕೆ ನೇರವಾಗುವ ಕಾರ್ಯ ಮಾಡುವುದು ಪತ್ರಕರ್ತರ ಕೆಲಸವಾದರೆ ಸುದ್ದಿ ಬಂದ ತಕ್ಷಣ ಸೌಜನ್ಯಕ್ಕಾದರೆ ಅಭಿನಂದಿಸುವ ಕಾರ್ಯ ನಡೆದಿಲ್ಲ ಇಂತಹ ಸಂದರ್ಭದಲ್ಲಿ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ಪವಿತ್ರಾ ಅಕ್ಕನವರ ಕಾರ್ಯ ಶ್ಲ್ಯಾಘನೀಯ ಎಂದರು.

- Advertisement -

ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ರಮೇಶ ಪೂಜಾರ, ನಾಗೇಶ ತಳವಾರ ಮಾತನಾಡಿ, ಪ್ರಸ್ತುತ ದಿನದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಪತ್ರಕರ್ತರಾದ ಮಹ್ಮದ ಅಶ್ಫಾಕ ಕರ್ಜಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಮಹಾಂತೇಶ ನೂಲಾನವರ, ವಿಜಯಕುಮಾರ ಪತ್ತಾರ, ಸುದರ್ಶನ ಜಂಗಾಣಿ, ಆರೀಫ ಅಂತರಗಂಗಿ, ಗುಂಡು ಕುಲಕರ್ಣಿ, ಶಿವಾನಂದ ಆಲಮೇಲ, ಅಂಬರೀಶ ಸುಣಗಾರ, ಶ್ರೀಶೈಲ ಗೊರಗುಂಡಗಿ, ವಸೀಮ್ ಗೋಗಿ, ರಶೀದ ಕುಮಸಗಿ, ಪ್ರೇಮಕುಮಾರ ಹಜ್ಜಣ್ಣವರ ಇವರನ್ನು ಗೌರವಿಸಲಾಯಿತು.

ಸೋಮನಾಥ ಬುಳ್ಳಾ, ಶಿವನಗೌಡ ಬಿರಾದಾರ, ಕೆ.ಎಸ್ ಪತ್ತಾರ, ಶ್ರೀಶೈಲಗೌಡ ಮಾಗಣಗೇರಿ, ವಿಜಯಕುಮಾರ ತೇಲಿ, ತಾನಾಜಿ ಕನಸೇ, ಡಾ. ಪ್ರಕಾಶ ಮೂಡಲಗಿ, ಸತೀಶ ಹಿರೇಮಠ, ಪ್ರೇಮಾ ನಾಯಕ, ಶಿವಕುಮಾರ ಶಿವಶಿಂಪಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

- Advertisement -

ಸಿ.ಎಂ ಮನಗೂಳಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಜಿ ಪಾಟೀಲ ಪ್ರಾಸ್ತಾವಿಕ ನುಡಿಗಳಲ್ಲಿ ಕನ್ನಡ ಪತ್ರಿಕಾರಂಗ ನಡೆದು ಬಂದ ಹಾದಿ ಹಾಗೂ ಪ್ರಜಾಪಿತ ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಕುರಿತು ಪರಿಚಯಿಸಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿ ವಂದಿಸಿದರು

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group