ಫೆ. 26ಕ್ಕೆ ಡಾ. ಬಾಬು ಜಗಜೀವನ ರಾಮ್ ಭವನ ಉದ್ಘಾಟನೆ

Must Read

ಸಿಂದಗಿ: ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ರವಿವಾರ ಫೇ 26 ರಂದು 11 ಗಂಟೆಗೆ ಡಾ. ಬಾಬು ಜಗಜೀವನ ರಾಮ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಲಿದ್ದು ಅದರ ಜೊತೆಗೆ ಮಾದಿಗರ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾಂಭವ ಯುವಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ದೊಡಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು,  ಶಾಸಕರಾದ ರಮೇಶ ಭೂಸನೂರ ಅವರ ನೇತೃತ್ವದಲ್ಲಿ ಜಾಂಬವ ಯುವ ಸೇನೆಯ ಸಹಬಾಗಿತ್ವದಲ್ಲಿ ಕಾರ್ಯಕ್ರಮ ಜರುಗುತ್ತಿದ್ದು, ಈ ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯವನ್ನು ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಪೀಠ ಹಾಗೂ ಶ್ರೀ ಷಡಕ್ಷರಿ ಮಹಾಮುನಿ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಮರಿ ಟೈಗರ್ ವಿನೋದ್ ಪ್ರಭಾಕರ ಆಗಮಿಸುತ್ತಿದ್ದಾರೆ. ಅದೇ ರೀತಿ ಸಂಸದರಾದ ರಮೇಶ ಜಿಗಜಿಣಗಿ, ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷರಾದ ಡಾ. ರಮೇಶ ಚಕ್ರವರ್ತಿ, ಪಾವಗಡ ಶ್ರೀರಾಮ ಹೈಕೋರ್ಟ್ ನ್ಯಾಯವಾದಿಗಳು ಬೆಂಗಳೂರ ಹಾಗೂ ಇನ್ನಿತರ ಗಣ್ಯಮಾನ್ಯರು ಆಗಮಿಸುತ್ತಿದ್ದು ಆದಕಾರಣ ತಾಲೂಕಿನ ಸಮಸ್ತ ಹಿರಿಯರು, ಮಾರ್ಗದರ್ಶಕರು, ಸಮುದಾಯದ ಬಂದುಗಳು -ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆ ಮೂಲಕ  ವಿನಂತಿಸಿಕೊಂಡಿದ್ದಾರೆ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group