- Advertisement -
ಡಾ. ಸಿದ್ಧೇಶ್ವರ ದೇವರು ಮರಿಕಟ್ಟಿ ಅವರಿಗೆ ಡಾಕ್ಟರೇಟ್ ಪದವಿ ದೊರಕಿದ್ದು ಆ ಕಾರಣವಾಗಿ ಹಿರೇಬಾಗೇವಾಡಿಯಲ್ಲಿ ಮಲ್ಲಿಕಾರ್ಜುನ ರೊಟ್ಟಿ ಸರ್ ಇವರ ಶಾಲಾ ಆವರಣದಲ್ಲಿ ಅವರಿಗೆ ಸತ್ಕಾರ ಜರುಗಿತು.
ಪ್ರಕಾಶ ಜಪ್ತಿ ರವರ ಕಾರ್ಯಾಧ್ಯಕ್ಷತೆಯಲ್ಲಿ ಗ್ರಾಮದ ಕೆಲಪ್ರಮುಖ ಹಿರಿಯರ ಸಮ್ಮುಖದಲ್ಲಿ ಮರಿಕಟ್ಟಿಯವರ ಅಭಿನಂದನಾ ಸಮಾರಂಭ ನಡೆಯಿತು.
ಅತಿಥಿಗಳಾಗಿ ವೇದಿಕೆಯಲ್ಲಿ ವಿಶ್ರಾಂತ ಶಿಕ್ಷಕರಾದ ಅರಳಿಕಟ್ಟಿ ಮೂಲಿಮನಿ ಮತ್ತು ಪೂಜ್ಯ ಶ್ರೀ ಯಲ್ಲಾಲಿಂಗರು ಬೈಲಹೊಂಗಲ ಉಪಸ್ಥಿತರಿದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ರೊಟ್ಟಿ , ಪಂಚಾಯತಿ ಸದಸ್ಯರಾದ ಸಿದ್ದಪ್ಪ ಹುಕ್ಕೇರಿ , ಗಟಿಗೆನ್ನವರು ನಿಂಗಪ್ಪ ರೊಟ್ಟಿ ಮತ್ತು ಗ್ರಾಮದ ಕೆಲ ಪ್ರಮುಖ ಹಿರಿಯರು ಭಾಗವಹಿಸಿದ್ದರು.