ಭಾವಗೀತೆ ಸ್ಪರ್ಧೆಯಲ್ಲಿ ಸವಿತಾ ನೆಲವಗಿ ಪ್ರಥಮ

Must Read

ಬೆಳಗಾವಿ – ಮಾಳಮಾರುತಿ ಬಡಾವಣೆಯಲ್ಲಿರುವ ನಾಗರಿಕ ವಿಕಾಸ ವೇದಿಕೆ ವತಿಯಿಂದ ಮಹೇಶ ಕಾಲೇಜಿನ ಸಭಾಭವನದಲ್ಲಿ ರಾಜ್ಯೋತ್ಸವ ನಿಮಿತ್ತ ದಿನಾಂಕ 28-11- 2021 ರಂದು ಏರ್ಪಡಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಶ್ರೀಮತಿ ಸವಿತಾ ನೆಲವಗಿ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಕ್ರಮವಾಗಿ ಶ್ರೀಮತಿ ರೂಪಾ ಶರಣ ಪ್ರಸಾದ ಹಾಗೂ ಮಂಗಲಾ ಪಾಟೀಲ ಪಡೆದುಕೊಂಡರು. ಶ್ರೀಮತಿ ಮಹೇಶ್ವರಿ ಮೆಳ್ಳೊಳ್ಳಿ ಹಾಗೂ ಶ್ರೀಮತಿ ಉಷಾ ನಾಯಕ ಅವರು ಸಮಾದಾನಕರ ಬಹುಮಾನಕ್ಕೆ ಪಾತ್ರರಾದರು. ವಿಜೇತರರಿಗೆಲ್ಲ ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ನಿರ್ಣಾಯಕರಾಗಿ ಸಂಗೀತಗಾರರಾದ ಶೇಷಗಿರಿ ಮುತಾಲಿಕ ದೇಸಾಯಿ ಹಾಗೂ ನಮ್ರತಾ ಜಾಗೀರದಾರ ಕಾರ್ಯನಿರ್ವಹಿಸಿದರು. ನಾಗರಿಕ ವಿಕಾಸ ವೇದಿಕೆಯ ಅಧ್ಯಕ್ಷರಾದ ಸಿ.ಎಂ ಬೂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿದರು. ಶ್ರೀ ಬಾಲಾಜಿ ಡೆವಲಪರ್ಸದ ಮುಖ್ಯಸ್ಥರಾದ ಶ್ರೀಮಹಾದೇವ ರಾಠೋಡ, ಮಾಜಿ ನಗರ ಸೇವಕ ಜಗದೀಶ ಚಿಮ್ಮಲಗಿ, ಶೇಷಗಿರಿ ಮುತಾಲಿಕ ದೇಸಾಯಿ, ಹಾಗೂ ನಮ್ರತಾ ಜಾಗೀರದಾರ ಇವರು ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ ವಿ ಅಣ್ಣಿಗೇರಿ, ಪ್ರಭಾಕರ ವನಹಳ್ಳಿ, ಅಶೋಕ ಮುನ್ನೊಳ್ಳಿ, ಎಸ್ಎಸ್ ರಾಮದುರ್ಗ, ಮನೋಜ ಬೆನಕೊಪ್ಪ, ಅರುಣ ನೇರ್ಲಿ, ಗಂಗೂಬಾಯಿ ತಿಗಡಿ, ವಿ ಸಿ ರಾಮದುರ್ಗ ಮುಂತಾದ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಎಸ್ ಸಿ ಗುಂಡಕಲ್ಲೆ ಸ್ವಾಗತಿಸಿದರು. ಸತೀಶ ಸವದಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಪಾಟೀಲ ವಂದಿಸಿದರು.ಇದೇ ಸಂದರ್ಭದಲ್ಲಿ ಅಬ್ದುಲ್ ರೆಹಮಾನ ನಾಗರಾಳ ಅವರು ರಚಿಸಿದ ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group