spot_img
spot_img

ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ

Must Read

- Advertisement -

ಬೆಳಗಾವಿ – ಬಸವರಾಜ ಮಲಶೆಟ್ಟಿ ಅವರು ಕೃಷ್ಣ ಪಾರಿಜಾತವನ್ನು ಮೂರು ತಾಸಿನಲ್ಲಿ ಅಭಿನಯಿಸುವ ಹಾಗೆ ಬರೆದು ಯಾವುದೇ ಪಾತ್ರಕ್ಕೂ ಚ್ಯುತಿ ಬರದ ಹಾಗೇ ನಾಟಕ ಆಡಿಸುವಂತೆ ರಂಗ ಸಜ್ಜಿಕೆ ಮಾಡಿ ಕೊಟ್ಟ ಖ್ಯಾತಿ ಅವರದು. ಜನಪದ ಉಳಿಸಿ ಬೆಳಸಿದ ಕೀರ್ತಿ ಇವರಿಗೂ ಸಲ್ಲುವುದು ಎಂದು ಶರಣೆ ಲಲಿತಾ ಕ್ಯಾಸನ್ನವರ ಹೇಳಿದರು.

ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ ೨೦. ೧೦. ೨೦೨೪ರಂದು ಸಾಮೂಹಿಕ ಪ್ರಾಥ೯ನೆ ಕಾರ್ಯಕ್ರಮದಲ್ಲಿ ಅವರಿಂದ ಉಪನ್ಯಾಸ ಜರುಗಿತು.

ಇಂದು ಜನಪದ ಕಲೆ ನಶಿಸಿ ಹೋಗುತ್ತಿದೆ. ಅದನ್ನು ಉಳಿಸಿ ಬೆಳಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಜಾನಪದ ವಾದ್ಯಗಳನ್ನು ಸಹ ಪರಿಚಯಿಸಿ ಅವುಗಳ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ ಈಗ ಹಾವೇರಿಯಲ್ಲಿ ಜಾನಪದ ವಿಶ್ವ ವಿದ್ಯಾಲಯ ಪ್ರಾರಂಭಿಸಿದ್ದಾರೆ. ಇಂದು ಮಲಶೆಟ್ಟಿ ಅವರು ಬರೆದ ಪುಸ್ತಕಗಳನ್ನು ಮರು ಮುದ್ರಣ ಮಾಡುತ್ತಿದ್ದಾರೆ ಎಂದರು.

- Advertisement -

ತಿಗಡೊಳ್ಳಿ ಗ್ರಾಮದಲ್ಲಿ ೧೯೪೭ರಲ್ಲಿ ಮರಿಕಲ್ಲಪ್ಪ ಮಲಶೆಟ್ಟಿ ಅವರು ಗಾಂಧೀಜಿ ಅವರ ಚಿತಾ ಭಸ್ಮ ತಂದು ಅದರಲ್ಲಿ ಆಲದ ಮರ ನೆಟ್ಟಿದ್ದಾರೆ ಅದಕ್ಕೆ ಅಲ್ಲಿ ಜನ ಗಾಂಧಿ ಮರ ಅನ್ನುವರು. ಈಗಲೂ ವಿಶೇಷ ದಿನಗಳಲ್ಲಿ ಪೂಜೆ ಸಲ್ಲಿಸುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರಾರಂಭದಲ್ಲಿ ಶರಣ ಸುರೇಶ ನರಗುಂದ ಪ್ರಾಥ೯ನೆ ನಡೆಸಿಕೊಟ್ಟರು. ವಿಕೆ ಪಾಟೀಲ, ಆನಂದಕಕಿ೯, ಜೆ ಪಿ ಜವಣಿ, ಸುನಿಲ ಸಾಣಿಕೊಪ್ಪ, ಮಹಾoತೇಶ ಇ೦ಚಲ, ಬಸವರಾಜ ಗುರಣಗೌಡ್ರ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ ಇತರರು ವಚನ ವಿಶ್ಲೇಷಣೆ ಮಾಡಿದರು. ಎಂ ವಾಯ್ ಮೆಣಸಿನಕಾಯಿ ಪರಿಚಯಿಸಿದರು.

ಸಂಗಮೇಶ ಬಾಬು ತಿಗಡಿ ದಾಸೋಹ ಸೇವೆಗೖದರು. ಬಾಬು ಮ ತಿಗಡಿ, ಸುವಣಾ೯ತಿಗಡಿ, ಪ್ರಗತಿ ಮ ಪಾಟೀಲ, ಮಲಗೌಡ ಶಿ ಪಾಟೀಲ, ಪೂಜಾ ಪಾಟೀಲ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶಿವಾನಂದ ತಲ್ಲೂರ, ಉಪಸ್ಥಿತರಿದ್ದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group