ಸಮನ್ವಯ ಸಮಾಜ ನಿರ್ಮಾಣಕ್ಕೆ ಸಿದ್ಧಾಂತ ಶಿಖಾಮಣಿ ರಚನೆ – ಚಂದ್ರಶೇಖರ ಶಿವಾಚಾರ್ಯರು

Must Read

ಸಿಂದಗಿ: ಭಾರತದೇಶವು  ದಾರ್ಶನಿಕರ, ಋಷಿಮುನಿಗಳ, ಆಚಾರ್ಯಗಳ ದೇಶವಾಗಿದ್ದು ಕಾರಣ ದೇಶದ ಸಂಸ್ಕೃತಿ, ಪಾರಂಪರಿಕವಾಗಿ ಹರಿದು ಬಂದ ಸಾವಿರ ವರ್ಷಗಳ ಹಿಂದೆ ಶ್ರೀ ಶಿವಯೋಗಿ ಶಿವಾಚಾರ್ಯರು ಜನ್ಮತಾಳಿ ಶೈವ ಪುರಾಣಗಳನ್ನು ಸಂಶೋಧನೆ ಮಾಡಿ ಜನರಿಗೆ ಸಮನ್ವಯ ಸಮಾಜ ನಿರ್ಮಿಸಲು ಸರ್ವಕಾಲಿಕ ಸಾರ್ವಭೌಮವಾಗಿ ಸಿದ್ದಾಂತ ಶಿಖಾಮಣಿ ಗ್ರಂಥವನ್ನು ರಚಿಸಿದ್ದಾರೆ ಎಂದು ಕಾಶೀ ಪೀಠದ ಶ್ರೀಮದ್ ಕಾಶೀಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದಂಗಳವರು ಹೇಳಿದರು.

ಪಟ್ಟಣದ ಸಾರಂಗಮಠದಲ್ಲಿ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿಯವರ  129 ನೇಯ ಜಯಂತ್ಯುತ್ಸವ ನಿಮಿತ್ತ  ಸಿದ್ದಾಂತ ಶಿಖಾಮಣಿಯ ಶ್ರೀ ಶಿವಯೋಗಿ ಶಿವಾಚಾರ್ಯರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿರುವ ಪ್ರಯುಕ್ತ ಪೂರ್ವಭಾವಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ಕೊಡಮಾಡುವ ಪ್ರಶಸ್ತಿಯೊಂದಿಗೆ ರೂ. 1ಲಕ್ಷ ನಗದು ನೀಡಲಾಗುತ್ತಿದ್ದು ಅದನ್ನು ವೀರಶೈವ ವಿಶ್ವಭಾರತಿ ಸಂಸ್ಥೆಗೆ ದೇಣಿಗೆ ರೂಪದಲ್ಲಿ ಕೊಡಲಾಗುತ್ತಿದೆ. ಅದ್ವೈತ, ದ್ವೈತವಾದಿಗಳು ಪರಂಪರೆಗಳು ದ್ವೈತಪುರಾಣಗಳು ಕೆಲವು ಅದ್ವೈತ ಸರಿ ಎನ್ನುತ್ತಿವೆ ಕೆಲವರು ದ್ವೈತ ಸರಿ ಎಂದು ವಾದಿಸುತ್ತಿವೆ ದ್ವೈತ-ಅದ್ವೈತಗಳು ಒಂದಕ್ಕೊಂದು ಘರ್ಷಣೆಯಲ್ಲಿ ಅದಕ್ಕೊಂದು ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ರಚಿಸಿ ಅದರ ಅರ್ಥ ನೀಡಿದ್ದಾರೆ. ದ್ವೈತ-ಅದ್ವೈತ ಸಂಘರ್ಷದ ಶಾಸ್ತ್ರಗಳಲ್ಲ. ಪ್ರಾಪಂಚಿಕ ದಿಸೆಯಲ್ಲಿ 6 ಸ್ಥಲಗಳಲ್ಲಿ ಸಿದ್ದಾಂತ ಶಿಖಾಮಣಿ ರಚಿಸಿದ ಈ ಗ್ರಂಥದಲ್ಲಿ ಸಾಮಾನ್ಯ ವ್ಯಕ್ತಿ ಶಿವನಾಗುವ ಶಕ್ತಿ ವಿಶ್ಲೇಷಿಸಲಾಗಿದೆ. ಅದನ್ನು 120 ಭಾಷೆಗಳಲ್ಲಿ ಅನುವಾದ ಮಾಡಲಾಗಿದೆ ಡಾ. ಜಚನಿ ಅವರು ಜೀವನ ಸಿದ್ದಾಂತ ಗ್ರಂಥವನ್ನು ಸರ್ವರಿಗೂ ತಿಳಿಯುವ ನಿಟ್ಟಿನಲ್ಲಿ ರಚಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಶಾಖಾಪುರ ಶ್ರೀಗಳು, ಡೋಣೂರ ಶ್ರೀಗಳು, ಕೊಣ್ಣೂರ ಶ್ರೀಗಳು, ಹುಲ್ಯಾಳ ಶ್ರೀಗಳು ಇದ್ದರು.

Latest News

ಅಲ್ಲಮರ ವಚನ ವಿಶ್ಲೇಷಣೆ ; ಉಳಿ ಮುಟ್ಟದ ಲಿಂಗ

ಎನಗೊಂದು ಲಿಂಗ ನಿನಗೊಂದು ಲಿಂಗ.          ಮನೆಗೊಂದು ಲಿಂಗವಾಯಿತ್ತು,                   ...

More Articles Like This

error: Content is protected !!
Join WhatsApp Group