spot_img
spot_img

ಶಾಲಾ ಮಕ್ಕಳಿಗೆ ಉಚಿತ ವೈದ್ಯಕೀಯ ಹಾಗೂ ಮೌಲ್ಯಾಂಕನ ಶಿಬಿರ

Must Read

- Advertisement -

ಮೂಡಲಗಿ – ನ. 29 ರಂದು ಸಮಗ್ರ ಶಿಕ್ಷಣ ಯೋಜನೆ ಅಡಿ ಕ್ಷೇತ್ರ ಶಿಕ್ಷಣಾಧಿಕಾರಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡಲಗಿ, ಹಾಗೂ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರ ಇವರ ಆಶ್ರಯದಲ್ಲಿ “ಮೂಡಲಗಿ ಶೈಕ್ಷಣಿಕ ವಲಯದ 1 ರಿಂದ 10 ನೇ ತರಗತಿಯ ವರೆಗಿನ ವಿಶೇಷಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು” ಹಮ್ಮಿಕೊಳ್ಳಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು  ಬಸಗೌಡ ಪಾಟೀಲ ನಾಗನೂರ ಇವರು ವಹಿಸಿದ್ದು, ಅತಿಥಿಗಳಾಗಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ಭಾರತಿ ಕೋಣಿ ಹಾಗೂ ಡಾ ಖಣದಾಳೆ ಯವರು ಆಗಮಿಸಿದ್ದರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಸಿ. ಮನ್ನಿಕೇರಿ ಉಪಸ್ಥಿತಿಯಲ್ಲಿ ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎ. ಸಿ ಮನ್ನಿಕೇರಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ವಿಶೇಷ ವಿಕಲಚೇತನ ಮಕ್ಕಳಿಗೆ ಶಾಲಾ ಶಿಕ್ಷಣ ನೀಡುವುದರ ಜೊತೆಗೆ ಜೀವನ ಶಿಕ್ಷಣ ನೀಡುತ್ತಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾ ವೈದ್ಯಕೀಯ ಸೌಲಭ್ಯಗಳನ್ನು ಹಾಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳವಂತೆ ಪಾಲಕರಿಗೆ ಸಲಹೆ ನೀಡಿದರು. 

- Advertisement -

ತಜ್ಞ ವೈದ್ಯರ ತಂಡದಲ್ಲಿ ಅಲಿಮಕೋ ದೆಹಲಿ, ಮನೋವಿಕಾಸ ಸಂಸ್ಥೆಯ ಡಾ|| ವಿಜಯಕುಮಾರ ಹಿರೇಮಠ ಹಾಗೂ ಇನ್ನುಳಿದ ವೈದ್ಯರು ಸೇರಿ ಮೂರು ನೂರಕ್ಕಿಂತ ಹೆಚ್ಚು ಮಕ್ಕಳ ತಪಾಸಣೆ ಕೈಗೊಂಡು ವಿವಿಧ ವಿಕಲತೆಗೆ ಅನುಗುಣವಾಗಿ ವಿಶೇಷಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರ ಅಧಿಕಾರಿಯವರಾದ ಶ್ರೀಮತಿ ಆರ್. ಎಮ್. ಆನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆಯ್.ಇ.ಆರ್.ಟಿ ಗಳಾದ  ವಾಯ್. ಬಿ. ಪಾಟೀಲ, ಎಮ್. ಎ. ಹೊಸಮನಿ,  ಜಗದೀಶ.ಖಾಕಂಡಕಿ, ಎಸ್. ಜಿ. ಮಾನೆ ಯವರು ಕಾರ್ಯಕ್ರವನ್ನು ವ್ಯವಸ್ಥಿತವಾಗಿ ಸಂಘಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಎಸ್.ವ್ಹಿ. ಕುನ್ನೂರೆ,  ಜಿ.ಆರ್. ಪತ್ತಾರ, ಎಸ್. ವಾಯ್ ಮೂಡಲಗಿ, ಆಯ್. ಎಸ್. ಬಡಿಗೇರ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಹಕರಿಸಿದರು. ಎಸ್.ವ್ಹಿ. ಕೇದಾರಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group