ಕಳೆದ ಏಳು-ಎಂಟು ವರ್ಷಗಳಿಂದ ಕಿರುಚಿತ್ರ ಹಾಗೂ ಸಿನಿಮಾಗಳಿಗೆ ವಿಭಿನ್ನವಾಗಿ ಪ್ರಚಾರ ನೀಡುತ್ತಿದ್ದ, ಯು ವಿ ಡಿಜಿಟಲ್ ಪ್ರಮೋಷನ್ ಸಂಸ್ಥಾಪಕ ಹಾಗೂ ಮಲ್ಟಿ ಟ್ಯಾಲೆಂಟ್ ಆಗಿರುವ ಬೆಂಗಳೂರಿನ ಉಮೇಶ್ ಕೆ ಎನ್ ಈಗ ಆಲ್ಬಂ ಸಾಂಗ್ ನಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಉಮೇಶ್ ಕೆ ಎನ್ ಅಭಿನಯದ ಮೊದಲನೇ ಪ್ರಯತ್ನವೇ “ಪ್ಲೇ ಗರ್ಲ್” ಆಫೀಶಿಯಲ್ ಮ್ಯೂಸಿಕ್ ವಿಡಿಯೋ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಗೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುಮಾರು ಹಾಡುಗಳನ್ನು ಬರೆದು ಧ್ವನಿ ನೀಡಿದ ಮಂಜು ಕವಿ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ.
ಕರ್ನಾಟಕದಾದ್ಯಂತ ಹೆಸರು ಗಳಿಸಿದ್ದ ಯು ವಿ ಡಿಜಿಟಲ್ ಪ್ರಮೋಷನ್ ಸಂಸ್ಥಾಪಕ ಉಮೇಶ್ ಈಗ ಬಹಳ ಫೇಮಸ್ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಬಿಗ್ ಸಿನಿಮಾಗಳಿಗೆ ಪ್ರಚಾರ ಕೊಡುವ ಉಮೇಶ್ ಪ್ಲೇ ಗರ್ಲ್ ಆಲ್ಬಂ ಸಾಂಗ್ ನಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇದೀಗ ಪ್ಲೇ ಗರ್ಲ್ ಎಂಬ ಹೊಸ ಕಾನ್ಸೆಪ್ಟ್ ನೊಂದಿಗೆ ಹೊಸ ಹಾಡಿನೊಂದಿಗೆ ಆಲ್ಬಂ ರೆಡಿ ಮಾಡಿದ್ದು, ಎಮ್ ಕೆ ಆಡಿಯೋ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದೆ. ಹೊಸ ಕಲಾವಿದರು ಅತಿ ಕಡಿಮೆ ವೆಚ್ಚದಲ್ಲಿ ಅದ್ದೂರಿ ಗೀತೆ ನಿರ್ಮಿಸುವ ಹೊಸ ಪ್ರಯತ್ನ ಮಾಡಿದ್ದಾರೆ ಉಮೇಶ್.
ತುಂಬಾ ಟ್ರೇಡಿಂಗ್, ಸಿಟಿ ಬೆಡಗನ್ನು ತೋರಿಸುವ ಗುರಿ ಇಟ್ಟುಕೊಂಡು ತಂಡ ಮೈಸೂರು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಪ್ಲೇ ಗರ್ಲ್ ಆಲ್ಬಂ ಗೀತೆ ಪ್ರೇಮಿಗಳಿಗೆ ಹೊಸ ಕೊಡುಗೆಯಾಗಲಿದೆ ಎಂದು ಉಮೇಶ್ ಹಾಗೂ ತಂಡ ಅಭಿಪ್ರಾಯಪಟ್ಟಿದೆ.
ಮೊದಲ ಬಾರಿಗೆ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿರುವ ಉಮೇಶ್ ಕೆ ಎನ್ ಅವರ ಚೊಚ್ಚಲ ನಟಿಸಿರುವ ಹಾಗೂ ಮಂಜು ಕವಿ ಅವರ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ಸಿರಿ ನಟಿಸಿ, ಮಂಜು ಕವಿ ಸಾಹಿತ್ಯ ಬರೆಯುವದರ ಜೊತೆಗೆ ಹಾಡಿದ್ದಾರೆ. ತಂತ್ರಜ್ಞಾನ ಬಳಗದಲ್ಲಿ – ಸಾಹಿತ್ಯ ,ಸಂಗೀತ ,ಗಾಯನ ಮಂಜುಕವಿ , ಸಂಕಲನ ನಾನಿ ಕೃಷ್ಣ, ಎಸ್ ಜೆ. ಸಂಜಯ್, ವಿಎಫ್ ಎಕ್ಸ್ , ನವೀನ್ ಮನೋಸಂಕಲ್ಪ ವಾದ್ಯ ಸಂಯೋಜನೆ ವೈಶಾಕ್ ಶಶಿಧರನ್ , ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನವೀನ್ ಕುಮಾರ್ ಬಿ.ಆರ್ , ಡಿ ಓ ಪಿ -ಎಸ್ .ಜೆ ಸಂಜಯ್, ಅರುಣ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ ಅವರದಿದೆ. ಈ ಗೀತೆಯು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದಂತಹ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಖತ್ ವೈರಲ್ ಆಗಿದೆ ಪ್ಲೇ ಗರ್ಲ್ ಆಲ್ಬಂ ಸಾಂಗ್.