ಮೂಡಲಗಿ – ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆಯ ಮಹೋದ್ದೇಶದಿಂದ ಹಾಗೂ ಹಿಂದೂ ಸಮಾಜ ಜಾಗೃತಿಗಾಗಿ ಇದೇ ದಿ.೨೪ ರಂದು ಮೂಡಲಗಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಬೃಹತ್ ಹಿಂದೂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು.
ಶ್ರೀ ಶಿವಬೋಧರಂಗ ಮಠದಲ್ಲಿ ಸಮಾವೇಶದ ಪೂರ್ವ ಸಿದ್ಧತೆಗಾಗಿ ಕರೆಯಲಾಗಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಬೃಹತ್ ಹಿಂದೂ ಸಮಾವೇಶವನ್ನು ಯಶಸ್ವಿಗೊಳಿಸಲು ಮೂಡಲಗಿ ಹೋಬಳಿ ಮಟ್ಟದಲ್ಲಿ ೧೨ ಹಳ್ಳಿಗಳ ಜನರೆಲ್ಲ ಭಾಗವಹಿಸಬೇಕು ಎಂದು ಕರೆ ನೀಡಿದ ಅವರು, ಅಂದು ಶ್ರೀ ಶಿವಬೋಧರಂಗ ಕೆಳಗಿನ ಮಠದಿಂದ ಬಸವಮಂಟಪದವರೆಗೆ ಶೋಭಾಯಾತ್ರೆ ನಡೆಯಲಿದೆ. ಸಾಯಂಕಾಲ ಸಮಾರಂಭ ನಡೆಯಲಿದೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪೀಠಾಧಿಪತಿಗಳಾದ ಶ್ರೀ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜಿ ಮೂಡಲಗಿ, ಬಾಗೋಜಿಕೊಪ್ಪ ಮುನ್ಯಾಳ ರಂಗಾಪೂರದ ಡಾ. ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶಿವಾಪೂರದ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಜೊಕ್ಕಾನಟ್ಟಿಯ ಯೋಗೀಶ್ವರ ಆಶ್ರಮದ ಶ್ರೀ ಬಿಳಿಯಾನಸಿದ್ಧ ಸ್ವಾಮೀಜಿ ವಹಿಸುವರು.
ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಯುವಾ ಬ್ರಿಗೇಡ್ ಪ್ರಮುಖ ಕಿರಣ ರಾಮ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸಂಜಯ ನಾಯಕ ಆಗಮಿಸುವರು.
ಆರೆಸ್ಸೆಸ್ ಶತಮಾನದ ವರ್ಷದ ಅಂಗವಾಗಿ ಹಿಂದೂಗಳಲ್ಲಿ ಒಗ್ಗಟ್ಟು ಬೆಳಸಲು ಹಿಂದೂ ವಿರಾಟ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾರಂಭದಲ್ಲಿ ಯಾವುದೇ ಜಾತಿ ಉಪಜಾತಿಗಳೆನ್ನದೆ ಎಲ್ಲ ಹಿಂದೂಗಳು ಭಾಗವಹಿಸಬೇಕು ಎಂದು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ತಿಳಿಸಿದರು.
ಸಭೆಯಲ್ಲಿ ಈರಣ್ಣ ಕೊಣ್ಣೂರ, ಮಲ್ಲಪ್ಪ ಮದಗುಣಕಿ, ಡಾ. ಬಿ ಎಮ್ ಪಾಲಭಾಂವಿ, ಸಂಜಯ ಮೊಖಾಶಿ, ಮಲ್ಲಪ್ಪ ಗಾಣಿಗೇರ, ಪ್ರವೀಣ ನೀಲನ್ನವರ, ಮಹಾದೇವ ಶೆಕ್ಕಿ, ನಿಂಗಪ್ಪ ಫಿರೋಜಿ, ಈರಪ್ಪ ಢವಳೇಶ್ವರ, ಕಿಟ್ಟು ನಾಶಿ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿಂದೂ ಸಮಾವೇಶದ ಪ್ರಚಾರ ಪತ್ರಿಕೆ ಬಿಡುಗಡೆ ಮಾಡಲಾಯಿತು.

