ಹಳ್ಳೂರ – ಸಮೀಪದ ಸೈದಾಪೂರ -ಸಮೀರವಾಡಿ ಪವಾಡ ಪುರುಷ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪ್ರಥಮ ದಿನ ರಥೋತ್ಸವವು ಅತೀ ವಿಜೃಂಭಣೆಯಿಂದ ನಡೆಯಿತು.
ಪ್ರಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ದೇವರಿಗೆ ಪೂಜೆ ಹಾಗೂ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಅರ್ಚಕರಾದ ಈರಯ್ಯ ಮತ್ತು ಮಾಂತಯ್ಯ ಸ್ವಾಮಿಗಳು ಹಾಗೂ ಗುರು ಹಿರಿಯರು, ಕಮೀಟಿಯ ಅಧ್ಯಕ್ಷರು ಸರ್ವ ಸದಸ್ಯರು ಚಾಲನೆ ನೀಡಿದರು.
ರಥೋತ್ಸವದ ಮೇಲೆ ಭಕ್ತರು ತಮ್ಮ ಹರಕೆ
ತೀರಿಸಲು ಕಾರಿಕ್, ಬೆಂಡು ಬತ್ತಾಸು,ಹೂ,ಬಾಳೆ ಹಣ್ಣು ಹಾರಿಸಿ ತಮ್ಮ ಹರಕೆ ತೀರಿಸಿದರು. ರಥೋತ್ಸವದ ಮುಂದೆ ಕಾಂಡ್ಯಾಳ ಬಾಸಿಂಗ್ ನಂದಿ ಕೋಲ, ಡೊಳ್ಳು ಕುಣಿತ ಕೋಲಾಟ ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ಮೇಳದೊಂದಿಗೆ ರಥೋತ್ಸವವು ಜರುಗಿತು.
ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಸುತ್ತಮುತ್ತಲಿನ ರಾಜಕೀಯ ಮುಖಂಡರು ಗೋಧಾವರಿ ಬೈಯೋ ರಿಪೈನರಿಜ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಮೇಲಾಧಿಕಾರಿಗಳು ಆಡಳಿತ ಮಂಡಳಿ ಅವರು ಕಾರ್ಮಿಕರು ಗ್ರಾಮಸ್ಥರು ಸೇರಿದಂತೆ,ಸಹಸ್ರಾರು ಭಕ್ತಾದಿಗಳು ಶ್ರೀ ಶಿವಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಜಾತ್ರೆಯೆಲ್ಲಿ ಅಂಗಡಿ ಮುಗ್ಗಟ್ಟಗಳು, ಜೆಕ್ ಸರ್ಕಸ್, ವ್ಯಾಪಾರ ಜೋರಾಗಿದ್ದು ಕಂಡು ಬಂದಿತ್ತು, ಜಾತ್ರೆಯು ಬಹಳ ವಿಶೇಷವಾಗಿ ಜರುಗಿತು.