ಮೂಡಲಗಿಯಲ್ಲಿ “ದೂರು ನಿರ್ವಹಣಾ ಕೋಶ”

Must Read

ಮೂಡಲಗಿ: ಚುನಾವಣೆಗೆ ಸಂಬಂಧಿಸಿದಂತೆ ಯಾರಾದರೂ ದೂರು ಸಲ್ಲಿಸಲು ಬಯಸಿದರೆ ಮೂಡಲಗಿ ತಹಶಿಲ್ದಾರರ ಕಚೇರಿಯಲ್ಲಿ “ದೂರು ನಿರ್ವಹಣಾ ಕೋಶ” ತೆರೆಯಲಾಗಿದ್ದು ಸಾರ್ವಜನಿಕರು ಅಲ್ಲಿ ದೂರು ದಾಖಲಿಸಬಹುದು ಎಂದು ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಭಾವತಿ ಎಫ್. ಪ್ರಕಟಿಸಿದ್ದಾರೆ.

ದಿ. ೩ ರಂದು ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಅರಭಾವಿ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆ ಸಂಬಂಧ ಏನಾದರೂ ದೂರುಗಳಿದ್ದರೆ ಮೂಡಲಗಿ ತಹಶಿಲ್ದಾರರ ಕಚೇರಿಗೆ ಸಮಕ್ಷಮ ಆಗಮಿಸಿ ‘ ದೂರು ನಿರ್ವಹಣಾ ಕೋಶ’ ಕ್ಕೆ ದೂರು ನೀಡಬಹುದು ಅಥವಾ ದೂರವಾಣಿ ಸಂಖ್ಯೆ ೦೮೦೨೩೯೦೦೮೬೩ ಹಾಗೂ ವಾಟ್ಸಪ್ ಸಂಖ್ಯೆ ೬೩೬೪೫೯೯೪೧೫ ಇಲ್ಲಿಗೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಮತದಾರರಿಗೆ ಆಮಿಷ ತೋರಿಸುವುದು, ಒತ್ತಡ ಹೇರುವುದು, ಹಣ ಹಂಚುವುದು, ಗಲಭೆ ಸೃಷ್ಟಿ ಮಾಡುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣವೇ ಚುನಾವಣಾಧಿಕಾರಿಗಳಿಗೆ ದೂರು ನೀಡಬಹುದು. ದೂರು ನೀಡಿದವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಎಂದು ಆಯೋಗ ತಿಳಿಸಿದೆ.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group