ಗುರ್ಲಾಪೂರ – ಗ್ರಾಮದಲ್ಲಿ ಒಳ್ಳೆಯ ಬೆಳೆ ಬಂದು ರೈತ ಖುಷಿಯಾಗಬೇಕಾದರೆ ಮಳೆಯು ಅತಿ ಅವಶ್ಯವಾಗಿ ಬೇಕಾಗಿರುತ್ತದೆ ರೈತ ಉತ್ತಮ ಬೇಸಾಯ ಮಾಡಬೇಕಾದ ಸಮಯದಲ್ಲಿ ಈ ವರ್ಷ ಮಳೆರಾಯ ಮುನಿಸಿಕೊಂಡು ರೈತರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕರವಾಗಬಾರದೆಂದು ದೇವರಲ್ಲಿ ಭಕ್ತಿಯ ಮೊರೆಹೋಗುವದು ಸಹಜ. ಹಾಗೆಯೇ ಗುರ್ಲಾಪೂರ ಗ್ರಾಮದ ಭಕ್ತರು ಶ್ರೀ ಬಸವೇಶರನಿಗೆ ಮೊರೆ ಹೋಗಿ ಮೂರು ಸೋಮವಾರ ಎರಡು ಗುರುವಾರ ದಿನದಂದು ವಿಶೇಷವಾಗಿ ಪೂಜೆ ಮಾಡಿ ನಮ್ಮ ರೈತರಿಗೆ ಯಾವುದೇ ತೊಂದರೆ ಯಾಗದಂತೆ ಭಜನೆ ಮತ್ತು ದೇವರ ನಾಮಸ್ಮರಣೆ ಮಾಡಿದರು.
ಸೋಮವಾರ ದಿ.10 ರಂದು ಸಂಜೆ 6 ಗಂಟೆಗೆ ಬಸವೆಶ್ವರನಿಗೆ ವಿಶೇಷವಾಗಿ ಪೂಜೆ ಮಾಡಿ ಮಹಾಮಂಗಳಾರುತಿ ಮಾಡಿದರು.
ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಗ್ರಾಮದ ಸಕಲ ಭಕ್ತರು ಆಗಮಸಿ ಪೂಜೆಯಲ್ಲಿ ಭಾಗವಹಸಿ ದೇವರ ಆರ್ಶೀವಾದ ಪಡೆದು ಮಹಾಪ್ರಸಾದ ತೆಗೆದುಕೊಂಡರು.