spot_img
spot_img

ಗುರುವಂದನೆಯು ಒಂದು ಅವಿಸ್ಮರಣೀಯ ಕ್ಷಣ – ವಿಶ್ರಾಂತ ಪ್ರಾಚಾರ್ಯ ಬಿ. ಬಿ. ಬಿರಾದಾರಪಾಟೀಲ ಅಭಿಮತ

Must Read

- Advertisement -

ಗೋಕಾಕ : ಅಂದಿನ ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಗುರುಗಳ ಮೇಲೆ ಭಕ್ತಿ, ಶಿಕ್ಷಣ ಸಂಸ್ಥೆಗಳ ಮೇಲೆ ಅನನ್ಯ ಪ್ರೀತಿ ಇರುತ್ತಿತ್ತು. ಆದರೆ ಇವತ್ತಿನ ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳು ಕಂಡುಬಾರದೆ ಇರುವುದು ವಿಷಾದನೀಯ ಎಂದು ಗೋಕಾಕದ ಜೆ.ಎಸ್.ಎಸ್. ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಬಿ. ಬಿ. ಬಿರಾದಾರಪಾಟೀಲ ಹೇಳಿದರು.

ಇತ್ತೀಚೆಗೆ ಗೋಕಾಕ ಶಿಕ್ಷಣ ಸಂಸ್ಥೆಯ ಶ್ರೀ ಜಗದ್ಗುರು ಶಿವಲಿಂಗೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸನ್ ೨೦೦೩ರ ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಗುರು ವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗುರುವಂದನೆಯು ಒಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ ಎಂದರು.

ಕನ್ನಡ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ ಈ ಕಾರ್ಯಕ್ರಮವು ಗುರುವಿಗೆ ನೀಡಿದ ಪ್ರೀತಿಯ ಕಾಣಿಕೆಯಾಗಿದೆ. ಈ ದಿನವು ನಮ್ಮ ಜೀವನದ ಮರೆಯಲಾಗದ ಕ್ಷಣ. ಏಕೆಂದರೆ, ಅನೇಕ ನಮ್ಮ ವಿದ್ಯಾರ್ಥಿಗಳು ಶಿಕ್ಷಣ ರಂಗದಲ್ಲಿ ಬೋಧಕರಾಗಿ ತೊಡಗಿರುವುದರಿಂದ ಅವರ ಹೊಟ್ಟೆಯಲ್ಲಿ ನಾವು ಪುನಃ ಹುಟ್ಟಿ ಬಂದಷ್ಟು ಸಂತಸ ನಮಗಾಗಿದೆ ಎಂದು ನುಡಿದರು.

- Advertisement -

ಕನ್ನಡ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಿ. ವ್ಹಿ. ಮಳಗಿ ಮಾತನಾಡಿ, ೨೦ ವರ್ಷಗಳ ಹಿಂದಿನ ನೆನಪುಗಳನ್ನು ಮೆಲಕು ಹಾಕಿ ಇಂದು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಗುರುವಿನ ಬೋಧನೆ ಸಾರ್ಥಕವಾಯಿತು ಎಂದರು. 

ಇದೇ ಸಂದರ್ಭದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಎಂ.ಬಿ.ಕುದರಿ, ಎಸ್.ಎಸ್.ತೇರದಾಳ ಮುಂತಾದವರು ಮಾತನಾಡಿ ವಿದ್ಯಾರ್ಥಿಗಳು ತೋರಿದ ಪ್ರೀತಿ, ವಿಶ್ವಾಸ, ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಗುರುವಂದನಾ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಹಳೆಯ ವಿದ್ಯಾರ್ಥಿಗಳಾದ ಮುತ್ತು ಮಾಮಗೌಡರ, ಭರಮಣ್ಣಾ ಗಂಗಣ್ಣವರ, ಚಂದ್ರು ಈರಗಾರ, ವಿನೋದ ಪಾಟೀಲ, ಅಜೇಯ ಉದೋಶಿ, ಶಿಲ್ಪಾ ದರಗಶೆಟ್ಟಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಜಿ. ಬಿ. ದಾನಗೌಡ, ಪಿ. ಜಿ. ಸಾವಗಾವ, ಜಿ. ಬಿ. ಮಮದಾಪೂರ, ಡಾ. ಎ. ಎಸ್. ತೇರದಾಳ, ರಮೇಶ ಬಡಿಗೇರ, ಎ. ಎಚ್. ಹೊಸಮನಿ, ಎಂ. ಜೆ. ಗಾಯಕವಾಡ, ವನಿತಾ ಮುದ್ರಬೆಟ್ಟು, ಡಾ. ಎ. ವೈ. ಪಂಗಣ್ಣವರ, ಜೆ. ಎಸ್. ಕೋಠಿವಾಲೆ, ಆರ್. ಜೆ. ದಾಸನ್ನವರ, ಜೆ. ಆರ್. ಕನ್ನಿನಾಯಕರ, ಕೆ. ಪಿ. ಕಂಬಾರ, ಎಂ. ಎಸ್. ತೇರದಾಳ, ಸಿ. ಬಿ. ಹಡಗಿನಾಳ, ಎಂ. ಜೆ. ಹಾವಣ್ಣವರ, ವ್ಹಿ. ಎಸ್. ಹಂಪಣ್ಣವರ ಮುಂತಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

ಡಾ. ರೇಖಾ ಹಳೆಮನಿ ನಿರೂಪಿಸಿದರು. ರಾಜಶ್ರೀ ಪಾಟೀಲ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ವಿದ್ಯಾ ಗೊಡಚಿನಮಲ್ಕಿ ಸ್ವಾಗತಿಸಿದರು. ವೈಶಾಲಿ ಪೂಜಾರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಪ್ಪ ದೇವರಮನಿ ವಂದಿಸಿದರು.

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group