spot_img
spot_img

ವಿಕಲಚೇತನರು ಕೂಡ ಮನುಷ್ಯರೇ ಅವರಿಗೂ ಬೌದ್ಧಿಕ ಸಾಮರ್ಥ್ಯವಿರುತ್ತದೆ – ವೈ ಬಿ ಕಡಕೋಳ

Must Read

- Advertisement -

ಮುನವಳ್ಳಿ :ಪಟ್ಟಣದ ವ್ಹಿ ಪಿ ಜೇವೂರ ಶ್ರವಣನ್ಯೂನತೆ ಮಕ್ಕಳ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ದಿನವನ್ನು ಆಚರಿಸಲಾಯಿತು.

ಮುಖ್ಯೋಪಾಧ್ಯಾಯರಾದ ಹರ್ಷಿತಾ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಗರ ಪುನರ್ವಸತಿ ಕಾರ್ಯ ಕರ್ತ ಸಂತೋಷ ಧಾರವಾಡ ಉಪಸ್ಥಿತರಿದ್ದರು. ಸಿವೆಟ್ ಕಂಪನಿಯ ಸುಭಾಸ ಧಾರವಾಡ. ಆರ್ ರಮೇಶ. ಎ. ವೆಂಕಟೇಶ ಎಸ್ ಕೆ ನಾಗೂರ. ಪಿ ಪುರುಷೋತ್ತಮ. ಉಪಸ್ಥಿತರಿದ್ದರು. ಸಿವೆಟ್ ಕಂಪನಿಯ ವತಿಯಿಂದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಸಿಹಿ ವಿತರಿಸಲಾಯಿತು.

ವೈ ಬಿ ಕಡಕೋಳ ಮಾತನಾಡಿ ” ಸಾಧನಗೆ ದೃಢವಾದ ಮನಸ್ಸು, ಛಲ ಇರಬೇಕು. ಇವೆರಡು ಇದ್ದರೇ ಯಾವ ವ್ಯಕ್ತಿಯಾದರೂ ಏನು ಬೇಕಾದ್ರೂ ಸಾಧಿಸಬಹುದಾಗಿದೆ. ಅಂಗವೈಕಲ್ಯ ಹೊಂದಿದವರು ತಮ್ಮನ್ನು ಅಸಹಾಯಕರು ಎಂದು ತಿಳಿದುಕೊಳ್ಳಲೇಬೇಕಿಲ್ಲ. ಅವರಿಗೂ ವಿಶೇಷ ಶಿಕ್ಷಣ, ಉದ್ಯೋಗಾವಕಾಶಗಳಿವೆ. ಅದರಾಚೆಯೂ ಸ್ವತಂತ್ರ, ಸ್ವಾವಲಂಬಿ ಬದುಕನ್ನು ಆಯ್ಕೆ ಮಾಡುಕೊಳ್ಳುವವರಿಗೆ ಹೊಸ ತಾಂತ್ರಿಕ ಆವಿಷ್ಕಾರಗಳು ಅಗತ್ಯ ನೆರವು ನೀಡಿ ಮುನ್ನಡೆಸಲಿವೆ. ತಾವೂ ಕೂಡ ಉತ್ತಮ ವಿದ್ಯಾಭ್ಯಾಸ ಮಾಡಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನ ಶೀಲರಾಗಿರಿ” ಎಂದು ಕರೆ ನೀಡಿದರು.

- Advertisement -

ಸಂತೋಷ ಧಾರವಾಡ ಮಾತನಾಡಿ, “ವಿಕಲಚೇತನ ರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶಿವೂ ಕಾಟೆ ಸಮನ್ವಯ ಶಿಕ್ಷಣ ಕುರಿತು ಸ್ವರಚಿತ ಕವನ ವಾಚನ ಮಾಡಿದರು. ಶ್ರೀಮತಿ ಎಸ್ ಎಂ ಬಡ್ಲಿ ಸಮನ್ವಯ ಶಿಕ್ಷಣ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಶಿಕ್ಷಕರಾದ ಎಲ್ ಎಚ್ ವಟ್ನಾಳ,  ಡಿ.ಕೆ.ಬೋರಗಾವಿ, ಐ.ಡಿ.ಅತ್ತಾರ, ಎಂ.ಎಂ.ಗೋಪಶೆಟ್ಟಿ, ಎಂ.ಪಿ ಮಾವಿನ ಕಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳನ್ನು ಆಡಿಸಲಾಯಿತು.
ಶಿವೂ ಕಾಟೆ ಕಾರ್ಯ ಕ್ರಮ ನಿರೂಪಿಸುವ ಜೊತೆಗೆ ಸ್ವಾಗತಿಸಿದರು. ಐ ಡಿ ಅತ್ತಾರ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group