ರಂಗು ರಂಗಿನ ಹಬ್ಬ
ಹೋಳಿ ಹೋಳಿ ಬಣ್ಣದೋಕುಳಿ
ಬದುಕು ಬವಣೆಗಳ ಜೀಕುಳಿ
ಪಾಲ್ಗುಣ ಮಾಸದ ಹುಣ್ಣಿಮೆ ಹಬ್ಬ
ಬಣ್ಣ ಬಣ್ಣದ ಆಸೆಗಳ ಹೊತ್ತ ದಿಬ್ಬ
ಗಿಡ ಮರದಿ ಹಸಿರು ಚಿಮ್ಮುವ ಕಾಲ
ಪುರುಷ ಹರುಷದಿ ಆಗುವ ಬಾಲ
ವಸಂತ ಋತುವನು ಸ್ವಾಗತಿಸಿ
ವಿಶ್ರಾಂತ ಸಮಯವ ಸಂಭ್ರಮಿಸಿ
ಮನದ ಕಾಮವ ದಹಿಸಿ
ಪವಿತ್ರ ಪ್ರೇಮವ ಬಯಸಿ
ವಿವಿಧ ಬಣ್ಣಗಳ ಎರಚುತಲಿ
ಮನದ ದ್ವೇಷಗಳ ಮರೆಯುತಲಿ
ಓಣಿ ಓಣಿಗಳಲಿ ಕಾಮನನ ಸುಟ್ಟು
ಬಡಕೊಂಡ ಬಾಯಿಗೆ ಹೋಳಿಗೆಯ ಇಟ್ಟು
ಮೇಲು ಕೀಳೆಂಬ ಭೇದ ತೋರದೇ
ಹಿರಿಯ ಕಿರಿಯರೆನುವ ನಾದ ಬಾರದೇ
ದಹಿಸೋಣ ಒಂದಾಗಿ ಕಾಮಣ್ಣ
ಸರಿಸೋಣ ಮುಖವಾಡದ ಬದುಕಣ್ಣ
ಸುಳ್ಳು ದಹಿಸಿ ಸತ್ಯ ನಿತ್ಯ ನೆಲಿಸಿ
ಅಧರ್ಮ ವಧಿಸಿ ಧರ್ಮ ಜಯಿಸಿ
ನಾವು ನಮ್ಮವರೆನುವ ಭಾವ ಬಿರೋಣ
ರಂಗು ರಂಗಾದ ಹಬ್ಬದಲಿ ನಲಿಯೋಣ
ಶ್ರೀಮತಿ ಎಸ್. ಎಮ್. ಕೋರಿ.
ಕೊಲ್ಹಾರ
ಬಂದಿತು ಬಣ್ಣಗಳ ಹಬ್ಬ
ರಂಗು ರಂಗಿನ ಹೋಳಿ ಹಬ್ಬ
ಹೆಣ್ಣು ಗಂಡೆಂಬ ಭೇದವ ಮರೆತು
ಕೂಡಿ ನಲಿಯುವ ಹಬ್ಬ ॥೧॥
ಮೇಲು ಕೀಳುಗಳ ಮರೆತು
ಬೆರೆಯಲಿ ಹೃದಯಗಳು
ಈರ್ಷೆ-ಮತ್ಸರವ ತೊರೆದು
ಒಂದಾಗಲಿ ಭಾವನೆಗಳು ॥೨॥
ಶೌರ್ಯದ ಕೇಸರಿ ಕಾಯಲಿ ಗಡಿಗಳ
ಸಮೃದ್ಧಿಯ ಹಸಿರು ಹಬ್ಬಲಿ ಹೊಲ-ಗದ್ದೆಗಳ
ಪ್ರೇಮದ ಕೆಂಪು ಕಾಣಲಿ ನಗು ಮೊಗಗಳ
ಅಂಧಕಾರದ ಕಪ್ಪನೋಡಿಸಿ ಬೆಳಗಲಿ ಬಿಳುಪು ಬಾನಂಗಳ
ಶ್ರೀಮತಿ ವೆಂಕುಬಾಯಿ ಎಸ್ ರಜಪೂತ (ಪ್ರೇಮಾ)
ಸ.ಕಿ.ಪ್ರಾ. ಶಾಲೆ ಧುತ್ತರಗಾಂವ ಹೊಸ ಬಡಾವಣೆ
ತಾ:ಆಳಂದ
ಜಿಲ್ಲಾ:ಕಲಬುರಗಿ
“ಬಣ್ಣದ ಹಬ್ಬ.”
ವಿಧ ವಿಧ ಬಣ್ಣವ ತಂದರು ಮಕ್ಕಳು
ರವಿ,ರಾಜು,ರಾಮುನ,ಗೆಳೆಯರು
ಓಣಿಯ ತುಂಬಾ ಬಣ್ಣ ಚೆಲ್ಲುತ
ರಾಧ,ರಾಜಿ,ರಷ್ಮೀ,ನಡೆದರು.
ಕೆಂಪು,ಹಳದಿ,ಬಣ್ಣ ಸೇರಿಸಿದರು
ಪಿಚಕಾರಿ ಹೂಡೆಯುತಾ ನಡೆದರು
ಎಲ್ಲರು ಮನೆ ಮನೆ ಸಾಗಿದರು
ಎದುರಿಗೆ ಸಿಕ್ಕವರಿಗೆ ಬಣ್ಣವ ಎರಚಿದರು.
ಬೇಧ,ಭಾವ,ಇಲ್ಲದೆ ಬಣ್ಣದ ಆಟವ ಆಡಿದರು
ವಯಸ್ಸಿನ ಅಂತರವ ಮರೆತರು
ಹಿರಿಯರು,ಕಿರಿಯರು,ಹೆಣ್ಣು ಮಕ್ಕಳು ಸೇರಿದರು
ಬಣ್ಣದ ಮುಖವ ನೋಡಿ ನಕ್ಕರು.
ಹೊಸ,ಹೊಸ,ಬಟ್ಟೆಯ ಧರಿಸಿದವರನ್ನು ಹುಡುಕಿದರು,ವಿಧ ವಿಧ ಬಣ್ಣವ ಸುರಿದರು
ಬಿಳಿ ಬಟ್ಟೆಯ ಬಣ್ಣದ ಬಟ್ಟೆ ನೋಡಿ ಆನಂದಿಸಿದರು
ಹೋ ಹೋ ಎಂದು ಎಲ್ಲರು ಕೂಗಿದರು.
ಮಕ್ಕಳ ಕೂರಳಲ್ಲಿಯ ಸಕ್ಕರೆಯ ಸರವನ್ನು
ಬಣ್ಣ ಬಣ್ಣದ ಸಕ್ಕರೆ ಸರ ಸವಿಯನ್ನುಂಡರು
ಮೈಯಲ್ಲ ವಿಧ ವಿಧ ಬಣ್ಣ ಕಂಡು ನಕ್ಕರು
ಬಣ್ಣದಹಬ್ಬ ಮಾಡಿದರು ಸ್ನಾನಕ್ಕೆ ಮನೆಗೆ ಓಡಿದರು
ಚಂದ್ರಕಲಾ ಎಂ,ಪಾಟೀಲ್. ಸ,ಶಿ,ಸರಕಾರಿ,ಪ್ರೌಢಶಾಲೆ, ಆಡಕಿ,ತಾ,ಸೇಡಂ,ಜಿ,ಕಲಬುರಗಿ.
ಹೋಳಿ ಹಬ್ಬ
ರಂಗು ರಂಗಿನ ಹೋಳಿ ಹಬ್ಬ
ಬಣ್ಣ ಬಣ್ಣದ ಓಕುಳಿ ಹಬ್ಬ
ದುಷ್ಟ ಗುಣಗಳ ಸುಡುವ ಕಾಮನ ಹಬ್ಬ
ಶಿಷ್ಟ ಗುಣಗಳ ಬೆಳೆಸುವ ಒಲವಿನ ಹಬ್ಬ
ಸಂವತ್ಸರದ ಕೊನೆಯ ಹಬ್ಬ
ವಸಂತನಿಗೆ ಸ್ವಾಗತ ನೀಡುವ ಹಬ್ಬ
ಮುತ್ತುಗದ ಹೂವಿಗೆ ಬಣ್ಣವಿಟ್ಟ ಹಬ್ಬ
ಸಕ್ಕರೆ ಅಚ್ಚಿನ ಸರದ ಸವಿ
ಹಬ್ಬ
ಹೋಲಿಕಾದೇವಿ ಸುಟ್ಟುಕೊಂಡ ಹಬ್ಬ
ಪ್ರಹ್ಲಾದನ ಹರಿಭಕ್ತಿ ಸಾರಿದ ಹಬ್ಬ
ಕಾಮನ ಬಿಲ್ಲಿನ ಹೆಸರಾದ ಕಾಮದ ಹಬ್ಬ
ರಂಗು ರಂಗಿನ ಕನಸಿನ ರಂಗೋಲಿ ಹಬ್ಬ
ರಾಧಾ ಕೃಷ್ಣರಾಡಿದ ರಂಗಿನ ಹಬ್ಬ
ಹಿರಿಯ ಕಿರಿಯರಾಡುವ ಸಮಾನ ಹಬ್ಬ
ಬಿಳಿ ಬಿಳಿ ಬಟ್ಟೆಗೆ ಬಣ್ಣ ತುಂಬುವ ಹಬ್ಬ
ಕುಂಚ ವಿಲ್ಲದೆ ಚಿತ್ರಬಿಡಿಸುವ ರವಿವರ್ಮ ನ ಹಬ್ಬ
ಎಸ್ ಸಾಲಿಮಠ