ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮಾಂಜ್ರಾ ನದಿಗೆ ಮಹಾ ಪ್ರವಾಹ ನಲುಗಿದ ಗಡಿ ಗ್ರಾಮಗಳ ಜನರು

Must Read

ಸಂಪರ್ಕ ಸೇತುವೆಗಳು ಜಲಾವೃತ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿ

ಬೀದರ :- ನೆರೆಯ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ತುಂಬಿದ ಮೂರು ಜಲಾಶಯಗಳಿಂದ 1ಲಕ್ಷಕ್ಕೂ  ಹೆಚ್ಚು ಕ್ಯುಸೆಕ್‌ ನೀರು ಬೀದರ ಜಿಲ್ಲೆಯ ಮಾಂಜ್ರಾ ನದಿಗೆ ಹರಿಸಿದ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, ಈಗಾಗಲೇ ಕೆಲ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ.

ಮಾಂಜ್ರಾ ನದಿ ಪ್ರವಾಹದಿಂದ ಜಿಲ್ಲೆಯ ಭಾಲ್ಕಿ, ಹುಲಸೂರ, ಔರಾದ್, ಕಮಲನಗರ ತಾಲೂಕಿನ ಕೆಲ ಗ್ರಾಮಗಳಲ್ಲೂ ಆತಂಕ ಸೃಷ್ಟಿಯಾಗಿದೆ. ಎಲ್ಲೆಡೆ ರಸ್ತೆ ಸಂಪರ್ಕ ಸೇತುವೆಗಳು ಮುಳುಗಡೆಯಾಗಿ ಜನಸಂಚಾರ ಕಡಿತಗೊಂಡಿದೆ

ಬೀದರ ತಾಲೂಕಿನ ಇಸ್ಲಾಂಪುರ ‌ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದೆ‌ ಗ್ರಾಮಸ್ಥರು ಗ್ರಾಮಕ್ಕೆ ತೆರಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ….

ಔರಾದ ತಾಲೂಕಿನ ಕೌಠಾ(ಬಿ) ಗ್ರಾಮದ ಸಮೀಪದ ಮಾಂಜರಾ ನದಿಯ ತುಂಬಿ ಹರಿಯುತ್ತಿದ್ದು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ವಿವಿಧ ಗ್ರಾಮಸ್ಥರು ಪ್ರವಾಹ ವೀಕ್ಷಿಸಲು ತಂಡೋಪತಂಡ ವಾಗಿ ಮಕ್ಕಳೊಂದಿಗೆ ಬಂದು ಪ್ರವಾಹ ವೀಕ್ಷಿಸಿ ಭಾವಚಿತ್ರ ತೆಗೆದುಕೊಂಡು ಸಂಭ್ರಮಿಸಿದರು

ಇನ್ನು ಇಸ್ಲಾಂಪುರ ಗ್ರಾಮಕ್ಕೆ ತೆರಳಲು ಹೇಗೆ ಎಂದು ಗ್ರಾಮಸ್ಥರು ಚಿಂತಿಸಿದ್ದರೆ ಹಲವರು ಪ್ರವಾಹದ ವೀಕ್ಷಿಸಿ ಸಂಭ್ರಮಿಸಿದ್ರು ಅದರಲಿಯೂ ಮಹಿಳೆಯರು ಮಕ್ಕಳು ‌ಭಾವಚಿತ್ರ ತೆಗೆದುಕೊಳ್ಳುವಲ್ಲಿ ಬಿಝಿ ಯಾಗಿದ್ರು
ರೈತರು ತಮ್ಮ ಹೊಲ ದತ್ತ ಕೈಮಾಡಿ ನನ್ನ ಹೊಲ ಸಂಪೂರ್ಣ ಮುಳುಗಡೆ ಆಗಿದ್ದೆ ಎಂದು ಕೈ ಮಾಡಿ ಕಣ್ಣಿರು ಹಾಕುತ್ತಿದ್ದರು
.
ಮಾಂಜರಾ ನದಿ ಪ್ರವಾಹ ದಿಂದ ಜನವಾಡ.ಇಸ್ಲಾಂಪುರ. ಕೌಠಾ(ಬಿ) ಗಡಿಕುಸನೂರ ಸೇರಿದಂತೆ ನದಿ ಪ್ರಾಂತದ ರೈತರ ಕಬ್ಬು ಸೋಯಾ ಅವರೆ.ಹತ್ತಿ..ಸಂಪುರ್ಣ ಜಲಾವೃತ ಆಗಿದ್ದು ರೈತ ಹೊಲಕ್ಕೆ ತೆರಳಿ ಅಳಿದುಳಿದ ಬೆಳೆಗಳಿಗೆ ‌ನೋಡಿ ಮಮ್ಮಲ ಮರುಗುತ್ತಿದು. ರೈತನಿಗೆ ಕಣ್ಣೀರೆ ಗತಿ ಯಾಗಿದೆ.ಮುಂಗಾರು ಬೆಳೆ ಸಂಪೂರ್ಣ ಕಳೆದುಕೊಂಡ ರೈತರು ಹಿಂಗಾರು ಬೆಳೆಯಾದರು ಕೈ ಹಿಡಿಯತ್ತಾ ಅಂದರೆ ಬಿತ್ತನೆ ಮಾಡಲು ಹಣದ ಕೊರತೆ ಹಣ ವಿಲ್ಲದೆ ಪರದಾಟ ನಡೆಸಿದ್ದು ತಕ್ಷಣವೇ ಸರ್ಕಾರ ರೈತರಿಗೆ ಪ್ರತಿ ಎಕರೆ ಗೆ 25ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group