spot_img
spot_img

ಕಾಳಜಿ ಕೇಂದ್ರಗಳಲ್ಲಿ ನರಕ ಸದೃಶ ಪರಿಸ್ಥಿತಿ ; ಅದೇ ರೇಷನ್ ಅಕ್ಕಿ, ಅದೇ ತಿಳಿ ಸಾರು, ಅವ್ಯವಸ್ಥೆಯ ಗೂಡು – ಅರವಿಂದ ದಳವಾಯಿ

Must Read

- Advertisement -

ಮೂಡಲಗಿ – ೨೦೧೯ ರ ಪ್ರವಾಹದ ಕಹಿ ನೆನಪು ಮಾಸುವ ಮುನ್ನವೆ ಮತ್ತೆ ಪ್ರವಾಹ ಬಂದಿದೆ. ಮೊದಲು ಗಂಜಿ ಕೇಂದ್ರ ಇದ್ದು ಈಗ ಕಾಳಜಿ ಕೇಂದ್ರ ಎಂದು ಹೆಸರಷ್ಟೆ ಬದಲಾಗಿದೆ ಆದರೆ ವ್ಯವಸ್ಥೆ ಬದಲಾಗಿಲ್ಲ. ಯಾವ ಕೇಂದ್ರದಲ್ಲಿಯೂ ಕಾಳಜಿ ಕಂಡು ಬರಲಿಲ್ಲ. ಸಂತ್ರಸ್ತರಿಗೆ ಅದೇ ರೇಷನ್ ಅಕ್ಕಿ ತಿಳಿ ಸಾರು, ಖಾರ ಉಪ್ಪು ಇಲ್ಲದ ತಿಳಿ ಸಾರು. ಅವ್ಯವಸ್ಥೆಯ ಗೂಡಾಗಿತ್ತು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜನ, ಜಾನುವಾರು ಉಪವಾಸ ಇವೆ. ಒಬ್ಬನೇ ಒಬ್ಬ ಸರ್ಕಾರಿ ಅಧಿಕಾರಿ ಇರಲಿಲ್ಲ. ಶಾಸಕರು ಒಂದೂ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟಿಲ್ಲ. ಅವರು ಮಂತ್ರಿಗಿರಿಗಾಗಿ ಲಾಬಿ ಮಾಡುವಲ್ಲಿ ಬಿಸಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಆಕ್ರೋಶ ವ್ಯಕ್ತಪಡಿಸಿದರು.

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಿಂದೆ ಎಲ್ಲಾ ಸಂಸ್ಥಾನದವರು ಮುತುವಲಿಗಳ ( ಕಾರಕೂನ ) ಮುಖಾಂತರ ಆಡಳಿತ ನಡೆಸುತ್ತಿರುವಂತೆ ಇಂದು ಅರಭಾವಿ ಶಾಸಕರು ನಾಗಪ್ಪ , ದಾಸಪ್ಪ, ನಿಂಗಪ್ಪ ಎಂಬ ಅವರ ಕಾರಕೂನರ ಮುಖಾಂತರ ಆಡಳಿತ ನಡೆಸುತ್ತಿದ್ದಾರೆ. ತಾವು ಸ್ವತಃ ಕಾಳಜಿ ಕೇಂದ್ರಗಳಿಗೆ ಭೇಟಿ ಕೊಟ್ಟಿಲ್ಲ. ತಮ್ಮ ಹಾಗೂ ತಮ್ಮ ಸಹೋದರರಿಗಾಗಿ ಮಂತ್ರಿಗಿರಿಯ ಲಾಬಿ ಮಾಡುವಲ್ಲಿ ಅವರು ಬಿಸಿಯಾಗಿದ್ದಾರೆ ಎಂದರು.

- Advertisement -

ಯಡಿಯೂರಪ್ಪ ಸರ್ಕಾರದಲ್ಲಿ ಎ ಬಿ ಸಿ ಎಂದು ಕೆಟಗರಿ ಮಾಡಿದ್ದರು ಅದರಲ್ಲಿ ಕೇವಲ ಶೇಕಡ ಹತ್ತರಷ್ಟು ಜನರಿಗೆ ಪರಿಹಾರ ಸಿಕ್ಕಿರಬಹುದು. ಇನ್ನೂ ತೊಂಬತ್ತು ಶೇ. ಜನರು ಇನ್ನೂ ತೊಂದರೆಯಲ್ಲಿದ್ದಾರೆ. ಸರ್ಕಾರ ಕಾಳಜಿ ವಹಿಸುತ್ತಿಲ್ಲ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ ದಳವಾಯಿಯವರು, ಕಲಾರಕೊಪ್ಪ ಗ್ರಾಮದಲ್ಲಿ ಜನರು ಅಕ್ಷರಶಃ ನರಕದಲ್ಲಿ ವಾಸ ಮಾಡುತ್ತಿದ್ದಾರೆ. ಹಿಂದೆ ದಿ. ವಿ ಎಸ್ ಕೌಜಗಿಯವರು ಇದ್ದಾಗ ಕಲಾರಕೊಪ್ಪ ಗ್ರಾಮಸ್ಥರ ಪುನರ್ವಸತಿಗಾಗಿ ತಪಶಿ ಗ್ರಾಮದಲ್ಲಿ ೨೦ ಎಕರೆ ಜಾಗ ನೀಡಿದ್ದರೂ ಕನಿಷ್ಠ ಪಕ್ಷ ಅದೇ ಜಾಗದಲ್ಲಿ ಮನೆ ಕಟ್ಟಿಕೊಡುವ ಸೌಜನ್ಯ ಮಾಡುತ್ತಿಲ್ಲ. ಇನ್ನೂ ಜನ ಪರಿತಪಿಸುತ್ತಿದ್ದಾರೆ.

ಮೆಳವಂಕಿ, ಧರ್ಮಟ್ಟಿ ಸೇತುವೆ ಬಿದ್ದು ಮೂರು ವರ್ಷವಾಯಿತು ಇನ್ನೂ ರಿಪೇರಿಯಾಗಿಲ್ಲ. ಇಲ್ಲಿನ ಜನರು ಹಳ್ಳದ ನೀರು ಕುಡಿಯುತ್ತಿದ್ದಾರೆ.

- Advertisement -

ದಯವಿಟ್ಟು ಈ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಸ್ವತಃ ನಾನೇ ಮನವಿ ಮಾಡಿಕೊಂಡರೂ ಪ್ರಯೋಜನವಿಲ್ಲ.

೨೦೧೯ ರಲ್ಲಿ ಫಲಾನುಭವಿಗಳ ಆಯ್ಕೆ ಮಾಡುವಾಗ ರಾಜಕೀಯ ಮಾಡಲಾಗಿದೆ. ಬೇರೆ ಪಕ್ಷದವರನ್ನು ಫಲಾನುಭವಿಗಳ ಲಿಸ್ಟ್ ನಿಂದ ದೂರವಿಡಲಾಗಿದೆ. ಇದು ಅನ್ಯಾಯ. ಅರಭಾವಿ ಕ್ಷೇತ್ರದ ನೆರೆ ಸಂತ್ರಸ್ತರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮನವಿ ನೀಡಲಾಗುವುದು ಎಂದ ಅವರು, ಈ ಸಮಯದಲ್ಲಿ ನಾನು ಗೋಕಾಕ ತಹಶೀಲ್ದಾರ ರಿಗೆ ಮಾಡುವ ಮನವಿ ಏನೆಂದರೆ, ನಿಜವಾಗಲೂ ತೊಂದರೆಯಲ್ಲಿ ಇರುವವರಿಗೆ ಸಹಾಯ ಮಾಡಿರಿ. ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಬೇಗನೆ ನೀಡಿರಿ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಅರವಿಂದ ದಳವಾಯಿ ಎಚ್ಚರಿಸಿದರು.

ಮತ್ತೋರ್ವ ಕಾಂಗ್ರೆಸ್ ಮುಖಂಡ ಸುಭಾಸ ಸೋನವಾಲಕರ ಮಾತನಾಡಿ, ಸಂತ್ರಸ್ತರ ಪರಿಹಾ ಕಮಿಟಿ ಕೂಡ ಪಕ್ಷಾತೀತವಾಗಿಲ್ಲ. ಮೂರು ವರ್ಷದಿಂದ ಪರಿಹಾರ ನೀಡಿಲ್ಲ.ಬಿಜೆಪಿ ಎಂದರೆ ಬರೀ ವಾಗ್ದಾನದ ಸರ್ಕಾರವಾಗಿದೆ. ಇದು ಹೋಗಬೇಕು ಪಕ್ಷಾತೀತವಾಗಿ ಎಲ್ಲರಿಗೂ ಪರಿಹಾರ ಸಿಗಬೇಕು ಆದರೆ ಇವರು ಕೇವಲ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ ಎಂದು ದೂರಿದರು.

ಇದೇ ಸಂದರ್ಭದಲ್ಲಿ ರವಿ ತುಪ್ಪದ ಮಾತನಾಡಿ, ಎಲ್ಲ ಕಾರ್ಖಾನೆಯವರು ಶೇರುದಾರರಿಗೆ ಸಕ್ಕರೆ ನೀಡುತ್ತಾರೆ ಹನ್ನೆರಡು ವರ್ಷಗಳಿಂದ ಗೋಕಾಕ ಸಹಕಾರಿ ಸಕ್ಕರೆ ಕಾರ್ಖಾನೆಯವರು ಸಕ್ಕರೆ ನೀಡಿಲ್ಲ. ಕಬ್ಬು ಕಳಿಸಿದ ರೈತರಿಗೆ ಸಕ್ಕರೆ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಪ ಸಂಖ್ಯಾತ ಘಟಕದ ಸಲೀಮ ಇನಾಮದಾರ, ರವಿ ಮೂಡಲಗಿ, ಸುರೇಶ ಮಗದುಮ್, ಇರ್ಷಾದ ಪೈಲ್ವಾನ್ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group