ಭೋಪಾಲ್ – ಮಧ್ಯಪ್ರದೇಶದ ಭೂಪಾಲ್ ನಿವಾಸಿ ನೀರಜ್ ನಿಗಮ್ ಪಶುಸಂಗೋಪನಾ ಇಲಾಖೆಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದ್ದರು. ಮಾಹಿತಿ ನೀಡಲು ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ರೂ. 2.12 ಲಕ್ಷ ಮಾಹಿತಿ ಶುಲ್ಕ ಕೇಳಿದ ಕಾರಣ, ಅರ್ಜಿದಾರರು ಉಚಿತ ಮಾಹಿತಿಗಾಗಿ ಮೇಲ್ಮನವಿಗೆ ಸಲ್ಲಿಸಿದರು.
ಪ್ರಥಮ ಮೇಲ್ಮನವಿ ಪ್ರಾಧಿಕಾರ ಮೇಲ್ಮನವಿ ತಿರಸ್ಕರಿಸಿದರು. ಉಚಿತ ಮಾಹಿತಿ ನಿರಾಕರಿಸಿದರು. ಕಾರಣ, ದ್ವಿತೀಯ ಮೇಲ್ಮನವಿಯನ್ನು ಆಯೋಗ ತಿರಸ್ಕರಿಸಿದ್ದಕ್ಕಾಗಿ ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋದರು.
ಮಧ್ಯಪ್ರದೇಶ ರಾಜ್ಯ ಉಚ್ಚ ನ್ಯಾಯಾಲಯ ತನ್ನ ಮುಂದೆ ಬಂದಿದ್ದ ರಿಟ್ ಪಿಟಿಷನ್ 29100 / 2023 ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿ ಮಾಹಿತಿ ಆಯುಕ್ತರ ವರ್ತನೆಗೆ ಚಾಟಿ ಬೀಸಿದೆ.
ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರು ಮಾಹಿತಿ ಆಯುಕ್ತರು ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಮಾಡಿ, ಸರ್ಕಾರದ ಪರವಾಗಿ ವರ್ತಿಸಿರುವುದಾಗಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಮಾಹಿತಿ ಆಯೋಗ ನೀಡಿದ ಆದೇಶವನ್ನು ರದ್ದುಪಡಿಸಿ, ಅರ್ಜಿದಾರರಿಗೆ 15 ದಿನಗಳೊಳಗೆ ಉಚಿತ ಮಾಹಿತಿಯನ್ನು ಒದಗಿಸುವಂತೆ ಆದೇಶಿಸಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಆದೇಶ ಮಾಡಿದೆ. ಜೊತೆಗೆ, ಮಾಹಿತಿ ಆಯುಕ್ತರಿಗೆ ರೂ.40,000 ದಂಡ ವಿಧಿಸಿದೆ. ಸದರಿ ಮೊತ್ತವನ್ನು ಅರ್ಜಿದಾರರಿಗೆ ದೂರು ವೆಚ್ಚವೆಂದು ಪಾವತಿಸಬೇಕೆಂದು ಕೋರ್ಟ್ ಹೇಳಿದೆ.