ಸಿಂದಗಿ: ನಾವೆಲ್ಲರೂ ಭಾರತೀಯರು, ಭಾರತೀಯರೆಲ್ಲರೂ, ಒಂದೇ ನಮಗೆಲ್ಲ ಒಂದೇ ಕಾನೂನು, ಒಂದೇ ಆಡಳಿತ ಇರುವಂತೆ ಒಂದೇ ಭಾಷೆಯನ್ನು ವ್ಯಾಪಕವಾಗಿ ಮಾತನಾಡಬೇಕು 1949 ಸಪ್ಟೆಂಬರ್ 14 ರಂದು ಭಾರತದ ಅಧಿಕೃತ ರಾಷ್ಟ್ರಭಾಷೆಯಾಗಿ ಹಿಂದಿ ಭಾಷೆ ಘೋಷಣೆ ಮಾಡಲಾಯಿತು ವಿಶ್ವದ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿ ಭಾಷೆ 4ನೇ ಸ್ಥಾನ ಪಡೆದಿದೆ ದೇಶವನ್ನು ಒಂದೇ ಸೂತ್ರದ ದಡಿ ಬಂದಿಸಲು ಒಂದು ಭಾಷೆಯ ಅವಶ್ಯಕತೆ ಇದೆ.
ನಾವೆಲ್ಲರೂ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಹಿಂದಿ ಭಾಷೆಯನ್ನು ಗೌರವಿಸೋಣ, ಉಳಿಸೋಣ, ಬೆಳೆಸೋಣ ಎಂದು ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರು ಶಿವಾನಂದ ಶಹಾಪುರ ಅವರು ಹೇಳಿದರು.
ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಭಾಷೆ ಹಿಂದಿಯ ವೈಶಿಷ್ಟತೆಯನ್ನು ಕುರಿತು ಮಾತನಾಡಿ ಹಿಂದಿ ಭಾಷೆಯ ಹಿರಿಮೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವುದರ ಮೂಲಕ ಹಿಂದಿ ವಿಷಯದ ಭಾಷಣ, ಪ್ರಬಂಧ, ಕ್ವಿಜ್, ಹಾಡುಗಳು ಏರ್ಪಡಿಸಿ ವಿಜೃಂಭಣೆಯಿಂದ ಹಿಂದಿ ದಿನಾಚರಣೆ ಆಚರಿಸಲಾಯಿತು.
ಶ್ರೀಮತಿ ಶೋಭಾ ಕೊಳೇಕರ್ ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ಸಂಗೀತ ಕೆ ಗುರುಮಾತೆಯರು ನೇರವೇರಿಸಿದರು. ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದಿ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಚೌಹಾನ್ ಪ್ರಥಮ,ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ಜ್ಯೋತಿ ಯಕ್ತಪೂರ್ ಪ್ರಥಮ, ಚಿತ್ರಕಲಾ ಸ್ಪರ್ಧೆಯಲ್ಲಿ ರಾಹುಲ್ ಓಲೇಕರ್ ಪ್ರಥಮ, ಕ್ವಿಜ್ ಕಾರ್ಯಕ್ರಮದಲ್ಲಿ ಪ್ರತಿಕ್ಷಾ ಹೂಗಾರ್, ಸ್ವಾತಿ ನಾಲ್ಕಮಾನ, ಶಿವಕುಮಾರ್ ಬಂಕಲಗಿ ಪ್ರವೀಣ್ ವಡಗೇರಿ ಭಾಗವಹಿಸಿದ್ದರು.
ಕುಮಾರಿ ಕೋಮಲ್ ರಾಥೋಡ್ ಹಿಂದಿ ಹಾಡುಗಳನ್ನು ಹಾಡುವುದರ ಮೂಲಕ ಹಿಂದಿ ದಿನಾಚರಣೆಗೆ ಮೆರಗು ತಂದುಕೊಟ್ಟರು.
ಸಭೆಯ ತದನಂತರ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.