- Advertisement -
ಬೈಲಹೊಂಗಲ – ಚಾರಿತ್ರಿಕ ಬೆಳವಡಿ ಉತ್ಸವದ ಅಂಗವಾಗಿ ದಿನಾಂಕ ೨೮-೨-೨೫ ರಂದು ಸಾ. ೭.೦೦ ಗಂಟೆಗೆ ಯ.ರು.ಪಾಟೀಲ ರಚಿಸಿದ ೧೨ನೇ ಚಾರಿತ್ರಿಕ ಕಾದಂಬರಿ *ನೆಲದೊಡಲ ಧ್ವನಿ ಶೂರ* ಕೃತಿಯನ್ನು ಬೈಲಹೊಂಗಲದ ಶಾಸಕರಾದ ಮಹಾಂತೇಶ ಕೌಜಲಗಿ ಯವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹೂಲಿ ಶ್ರೀಗಳಾದ ಶಿವಮಹಾಂತೇಶ ಮಹಾಸ್ವಾಮಿ ಗಳು, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ರವರು, ಬೈಲಹೊಂಗಲದ ಉಪವಿಭಾಗಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಫಕೀರಪುರೆ , ಬೆಳವಡಿ ರಾಣಿ ಮಲ್ಲಮ್ಮ ಶೌರ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಕವಿತಾ ಮಿಶ್ರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ಶ್ರೀಮತಿ ವಿದ್ಯಾ ಭಜಂತ್ರಿ, ಬೆಳವಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರಯ್ಯ ಕಾರಿಮನಿ, ಬೈಲಹೊಂಗಲದ ತಹಸೀಲ್ದಾರ್ ಶಿರಹಟ್ಟಿ, ಪೋಲೀಸ್ ಅಧಿಕಾರಿ ನಾಯಕರವರು, ಸವದತ್ತಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಉಪಸ್ಥಿತರಿದ್ದರು.
ಮಹಾಂತೇಶ ಉಪ್ಪಿನ ಕಾರ್ಯಕ್ರಮ ನಿರೂಪಿಸಿದರು.