Homeಸುದ್ದಿಗಳುಗಜಲ್ ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ

ಗಜಲ್ ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ದಿ. ಜ್ಯೋತಿ ಮೂಗಿ ದತ್ತಿ ನಿಮಿತ್ತ ಕನ್ನಡ ಗಜಲ್ ಸಾಹಿತಿಗಳ ಸನ್ಮಾನ ಕಾರ್ಯಕ್ರಮ ದಿನಾಂಕ 21.01.2024 ರಂದು ಕನ್ನಡ ಭವನ ನೆಹರು ನಗರದಲ್ಲಿ ಜರುಗಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಲಾ ಮೆಡಗುಡ್ಡ ಕ ಸಾ ಪ ಜಿಲ್ಲಾ ಅಧ್ಯಕ್ಷರು ವಹಿಸಿದ್ದರು.

 ಅವರು ಮಾತನಾಡುತ್ತಾ, ಕವ್ವಾಲಿ ಗಜಲ್ ಹಾಡುವುದು ಯಕ್ಕುಂಡಿಯಲ್ಲಿ ಕೇಳಿದೆ ಇವರಿಗೆ ದತ್ತಿ ಕಾಯ೯ಕ್ರಮ ದಲ್ಲಿ ಅವಕಾಶ ನೀಡಿದೆ ಇವರ ಗಜಲ್ ಉತ್ತಮವಾಗಿದೆ ಹೊಸ ಪರಿಚಯ ನೀಡಿದ್ದೇನೆ ಎಂದರು.

ಮುಖ್ಯ ಅತಿಥಿಗಳಾಗಿ ಸುಭಾಷ್ ಏಣಗಿ ಆಗಮಿಸಿದ್ದರು ಜ್ಯೋತಿ ಮೂಗಿಯವರು ಅಪಘಾತದಲ್ಲಿ ತೀರಿ ಹೋದರು ಅವರ ನೆನಪಿಗಾಗಿ ಅವರ ದೊಡ್ಡಪ್ಪ ಚಿಕ್ಕಪ್ಪನವರು ಕ ಸಾ ಪ ದಲ್ಲಿ ದತ್ತಿನಿಧಿ ಇಟ್ಟು 2009ರಿಂದ ನಡೆದು ಕೊಂಡು ಬರುತ್ತಿವೆ ಗಜಲ್ ಕವ್ವಾಲಿ ಹೊಸ ಪ್ರಯೋಗ ಹೊಸಬರನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಅತಿಥಿಗಳಾಗಿ ಎನ್ ಆರ್ ಠಕ್ಕಾಯಿ ಅಧ್ಯಕ್ಷರು ಕ ಸಾ ಪ ಬೈಲಹೊಂಗಲ ಆಗಮಿಸಿದ್ಧರು. ಎಂ ವೈ ಮೆಣಸಿನಕಾಯಿ ಅವರು ದತ್ತಿ ದಾನಿಗಳನ್ನು ಪರಿಚಯಿಸಿದರು ಸನ್ಮಾನಿತರನ್ನು ಮಲ್ಲಿಕಾರ್ಜುನ ಕೋಳಿ ಅವರು ಪರಿಚಯಿಸಿದರು ಅಬ್ದುಲಗಣಿಸಾಬ ಬಾಗೇವಾಡಿ ಹುಸೇನತಾಜ ಮುಲ್ಲಾ ಶಮಾಜಮಾದಾರ ಮೆ ಜಮಾದಾರ ಎಂ ಡಿ ಬಾವಖಾನ ಇವರು ಗಜಲ್ ಕವ್ವಾಲಿ ಹಾಡಿದರು ಇವರನ್ನು ಅಧ್ಯಕ್ಷರು ಅತಿಥಿಗಳು ಸನ್ಮಾನಿಸಿದರು. ಅಬ್ದುಲ್ ಗನಿಸಾಬ ಬಾಗೇವಾಡಿ ಅವರು ಬರೆದ ಬೆಳದಿಂಗಳ ಚೆಲ್ಲಿದರೆ ಹಾಡು ಉಸ್ತಾದ ಗನಿಸಾಹೇಬರ ಮೇಳಗೀತೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಅಂಗಡಿ ಪ್ರಾಸ್ತಾವಿಕ ಮಾತನಾಡಿದರು ಪ್ರತಿಭಾ ಕಳ್ಳಿಮಠ ಸ್ವಾಗತಿಸಿದರು ನಾಡಗೀತೆ ಆಶಾ ಯಮಕನಮಡಿ೯ ಇಂದಿರಾಮೊಟೆಬೆನ್ನೂರ ಸಂಗಡಿಗರು ಹಾಡಿದರು ಶಿವಾನಂದ ತಲ್ಲೂರ ನಿರೂಪಿಸಿದರು ನರಸಿಂಗ ಬ ಕಮತಿ, ಎಂಎ ಮದ್ದಿನಮಠ, ಸುಧಾ ಪಾಟೀಲ, ಡಾ ಅ ಬ ಇಟಗಿ, ಎಸ್ ಎಸ್ ಕಬ್ಬೂರ, ಎ ಬಿ ಬಾಗೇವಾಡಿ, ಎ ಆರ್ ಕಿತ್ತೂರ, ಪಿ ಬಿ ಯಲಿಗಾರ, ಸುರೇಶ ಹಂಜಿ,  ಭಾರತಿ ಮದಭಾವಿ, ಮಹಾದೇವಿ ಅಂಗಡಿ, ರಾಜನಂದಾ ಘಾಗಿ೯,ಎ ಎಸ್ ಕಡೆಟ್ಟಿ, ಡಾ ಜಯಾನಂದ ಧನವಂತ, ಪಿ ಆರ್ ಕಡಬಿ, ಪಿ ಎಲ್ ಹೂಗಾರ ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group