Homeಕವನಕವನ: ಬಂದ ರಾಮ ಲಲ್ಲಾ

ಕವನ: ಬಂದ ರಾಮ ಲಲ್ಲಾ

 

ಬಂದ ರಾಮ ಲಲ್ಲಾ

ಬಂದನೋ ಬಂದನಮ್ಮ

ಬಂದನು… ಶ್ರೀ ರಾಮ

ಬಂಧು ಭಗಿನಿ ಎಲ್ಲ ಸೇರಿ

ಆರತಿ ತನ್ನಿರಮ್ಮ

ಝಗಮಗಿಸಿತು ದೀಪದಿಂದ

ಇಡೀ ಭರತ ಭೂಮಿ

ನೆಲೆಗೊಂಡಿತು ಕಂಡ ಕನಸು

ಎಂಥ ಸೊಗಸು ಸ್ವಾಮಿ 

ಹಿಂದು ಮುಂದೂ ಎಂದೂ ಇಂಥ

ಘಳಿಗೆ ಕಂಡೇ ಇಲ್ಲ

ಮಂದಸ್ಮಿತದಿ ನಿಂತಿಹ ನೋಡಿ

ನಮ್ಮ ರಾಮ ಲಲ್ಲಾ

ಇತಿಹಾಸದ ಸ್ವರ್ಣ ಯುಗವು 

ಮರಳಿ ಬರುವ ಸೂಚನೆ

ಗತ ಕಾಲವ ಮರುಕಳಿಸಿತು 

ಯಾಕೆ ಇನ್ನು ಯೋಚನೆ.


 ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

RELATED ARTICLES

Most Popular

error: Content is protected !!
Join WhatsApp Group