ಹುನಗುಂದ : ಬಸವೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ೨೮.೭೨ ಲಕ್ಷ ರೂ ನಿವ್ವಳ ಲಾಭ

Must Read

ಹುನಗುಂದ; ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘವು ಶೇರುದಾರ ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ೨೦೨೪- ೨೫ ನೇ ಸಾಲಿನಲ್ಲಿ ೧೮.೭೨ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಹೊಸೂರ ಹೇಳಿದರು.

ಇಲ್ಲಿನ ಪುರಸಭೆ ಮಂಗಲಭವನದಲ್ಲಿ ನಡೆದ ೨೩ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ ಸಂಘವು ಇಲ್ಲಿಯವರೆಗೆ ೧೨೯೮೯ ಸದಸ್ಯರನ್ನು ಹೊಂದಿ ೪.೦೯ ಕೋಟಿ ಶೇರು ಬಂಡವಾಳವನ್ನು ಹೊಂದಿದೆ. ೪.೩೯ ಕೋಟಿ ನಿಧಿಗಳನ್ನು ಹೊಂದಿ ೧೨೦.೦೮ ಕೋಟಿ ದುಡಿಯುವ ಬಂಡವಾಳನ್ನು ಹೊಂದಿದೆ. ೯೦.೮೩ ಕೋಟಿ ಠೇವು ಸಂಗ್ರಹವಾಗಿದೆ. ೮೩.೮೫ ಕೋಟಿ ಸಾಲವನ್ನು ವಿತರಿಸಲಾಗಿದೆ. ಸಂಘದ ಮೂಲ ಕಚೇರಿ ಸೇರಿದಂತೆ ಎಲ್ಲ ಶಾಖೆಗಳ ಕಚೇರಿಗಳು ಸಂಪೂರ್ಣ ಗಣಕೀಕೃಗೊಂಡಿವೆ ಎಂದರು.

ಮುಖ್ಯ ಕಾರ‍್ಯ ನಿರ್ವಾಹಕ ಶರಣು ಚಳಗೇರಿ ಮತ್ತು ಸಿಬ್ಬಂದಿ ೨೦೨೫-೨೬ನೇ ಸಾಲಿನ ಲೆಕ್ಕಪರಿಶೋಧಕರ ನೇಮಕ ಮತ್ತು ಲಾಭಾಂಶದ ಘೋಷಣೆ ಹಾಗೂ ಜಮಾ ಖರ್ಚು ವಿವರ ನೀಡಿದರು. ಸಂಘಕ್ಕೆ ಇಲಕಲ್ ನಗರದಲ್ಲಿ ೧೬೦೦ ಸ್ಕೇರ್ ಫೂಟ್ ಜಾಗೆಗೆ ೭೧ಲಕ್ಷ ನೀಡಿ ಖರೀದಿಸಿರುವದು ಸದರ ಸಂಘಕ್ಕೆ ಹಾನಿಯಾಗಿದೆ ಎಂದು ಸದಸ್ಯ ಶಶಿಕಾಂತ ನಿಡಗುಂದಿ ಅವರ ಪ್ರಶ್ನೆಗೆ ಜಾಗೆಯು ನಗರದ ಮಧ್ಯ ಭಾಗದಲ್ಲಿರುವದರಿಂದ ಅಲ್ಲಿನ ಮಾರುಕಟ್ಟೆ ದರ ಅಷ್ಟಿದ್ದರಿಂದ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಜಾಗೆ ಎಂದು ಖರೀದಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮತ್ತು ಮುಖ್ಯ ಕಾರ‍್ಯನಿವಾಹಕರು ಉತ್ತರಿಸಿದರು. ಕನಿಷ್ಟ ೩೦೦ ಸದಸ್ಯರು ಇದ್ದರೆ ಮಾತ್ರ ಶಾಖೆಯನ್ನು ತೆರೆಯಲು ನಿಯಮದಂತೆ ಅವಕಾಶವಿದ್ದು ಕೆಲವೊಂದು ಶಾಖೆಗಳಲ್ಲಿ ಕೇವಲ ಕನಿಷ್ಠ ಸದಸ್ಯರು ಹೊಂದಿ ಅಲ್ಲಿ ಶಾಖೆ ಪ್ರಾರಂಭಿಸಿರುವದರಿಂದ ಬ್ಯಾಂಕ್ ಸಾಕಷ್ಟು ಹಾನಿ ಅನುಭವಿಸುತ್ತಿದೆ ಎಂದು ಸದಸ್ಯ ನೀಲಪ್ಪ ಮುಕ್ಕಣ್ಣವರ ಪ್ರಶ್ನೆಗೆ ನಿಯಮವಿದೆ ನಿಜ. ಬ್ಯಾಂಕ್ ಲಾಭ ಕಡಿಮೆ ಆಗಿದ್ದು ನಿಜ. ಆದರೆ ಹೊಸ ಶಾಖೆಗಳಲ್ಲಿ ಕ್ರಮೇಣ ಸದಸ್ಯರ ಸಂಖ್ಯೆ ಹೆಚ್ಚಾಗಿ ನಂತರ ಲಾಭಾಂಶ ಬರಲು ಸಾಧ್ಯ ಎಂದು ಮಖ್ಯ ಕಾರ್ಯ ನಿರ್ವಾಹಕ ಎಸ್.ಸಿ. ಚಳಗೇರಿ ಉತ್ತರಿಸಿದರು.

ಪ್ರಸಕ್ತ ವರ್ಷದಲ್ಲಿ ಬ್ಯಾಂಕಿನ ಲಾಭಾಂಶ ಕಡಿಮೆಯಾಗಲು ಸದಸ್ಯರು ಕಾರಣ ಕೇಳಿದಾಗ ನಮ್ಮ ತಾಲೂಕ ಕೃಷಿ ಪ್ರದೇಶವಾಗಿದ್ದರಿಂದ ಸಾಲಗಳು ರಿಬಾಂಡ್ ಆಗದೆ ಇರುವದರಿಂದ ಬ್ಯಾಂಕಿಗೆ ಆರ್ಥಿಕ ಹಿನ್ನಡೆಯಾಗಿದೆ ಎಂದರು.

ಈ ವೇಳೆ ಸದಸ್ಯರ ಮಕ್ಕಳು ಹೆಚ್ಚು ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ರಾಮೇಶ ಮೂಲಿಮನಿ, ಹೊನ್ನಪ್ಪ ರೋಣದ, ಸಂಗಣ್ಣ ಹುನ್ನಳ್ಳಿ, ಸೋಮಶೇಖರ ತೋಟಗೇರ, ಸಂಗಪ್ಪ ಹೂಲಗೇರಿ, ಶಿವಕುಮಾರ ಬಾದವಾಡಗಿ, ಅನ್ನದಾನೇಶ ಹಾದಿಮನಿ, ಹಿರಣ್ಯಪ್ಪ ಆಲೂರ, ಚಂದ್ರು ತಳವಾರ ನಿಂಗಪ್ಪ ಲೋಕಾಪೂರ, ಅನ್ನಪೂರ್ಣ ಹೊಸೂರ, ಶಾಂತಾ ಹಳಪೇಟಿ, ಸೇರಿದಂತೆ ಇತರರು ಇದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group