ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜಾ ಮನೋಭಾವದಿಂದಾಗಿ ಅವರಿಗೆ ಕುಟುಂಬದಲ್ಲಿ ಹೆಚ್ಚು ಗೌರವ ಇದೆ ಎಂದು ಕಾಯಕ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಹಾಂತಯ್ಯ ಶಿ ಹಿರೇಮಠ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹಿರೇಮಠದ ಪರಿವಾರದವರು ಹಮ್ಮಿಕೊಂಡ ಶ್ರೀ ದೇವಿ ಪುರಾಣ ಪ್ರವಚನ ಮಂಗಲೊತ್ಸವದಲ್ಲಿ 1265 ಮುತೈದೆಯರಿಗೆ ಉಡಿತುಂಬವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶೃದ್ಧಾ ಭಕ್ತಿಯಿಂದ ಶ್ರೀದೇವಿಯನ್ನು ಮನದಲ್ಲಿ ಪ್ರತಿ ನಿತ್ಯ ಪೂಜಿಸಿ ಗೌರವಿಸವದರಿಂದ ಬಂದ ಕಷ್ಟಗಳು ದೂರವಾಗುತ್ತವೆ. ಹಿರೇಮಠದ ಗುರು ಹಿರಿಯರು ಆಶೆಯಂತೆ ಹಿರೇಮಠ ಹಾಗೂ ಗ್ರಾಮದ ಸರ್ವ ಭಕ್ತರ ಹಾಗೂ ಕುಟುಂಬದವರು ಶ್ರೀದೇವಿಯ ಪುರಾಣ ಪ್ರವಚನ ಆಲಿಸುವ ಮೂಲಕ ಉತ್ತಮ ಕಾರ್ಯ ಮಾಡುವದರಿಂದ ಸರ್ವರಿಗೂ ಶ್ರೀದೇವಿ ಒಳಿತು ಮಾಡಲಿ ಎಂದು ಶುಭ ಕೋರಿದರು.
ದಾನಯ್ಯ ಮಲ್ಲಿಕಾರ್ಜುನಯ್ಯ ಹಿರೇಮಠ ಮಾತನಾಡಿ, ಇಂದು ಮಹಿಳೆಯರು ನಿತ್ಯ ಧಾರಾವಾಹಿಗಳಲ್ಲಿ ಬರುವ ದೃಶ್ಯ ನೋಡಿ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯನ್ನು ಕೈ ಬಿಟ್ಟು ನಾವು ನಮ್ಮ ಭಾರತೀಯ ಸಂಸ್ಕೃತಿಯನ್ನು ಮೆಚ್ಚುವ ಮೂಲಕ ಸಾತ್ವಿಕ ಜೀವನ ನಡೆಸಬೇಕು ಎಂದರು.
ದೇವಿ ಪುರಾಣ ವಾಚಕ ಶಾಂತಯ್ಯ ಗುರಲಿಂಗಯ್ಯ ಹಿರೇಮಠ, ಬಸಲಿಂಗಯ್ಯ ಮಲ್ಲಯ್ಯ ಹಿರೇಮಠ ಮಾತನಾಡಿ, ನಮ್ಮ ಗುರು ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮುಖಾಂತರ ಧರ್ಮ.ಆಚಾರ.ವಿಚಾರ. ಸಂಪ್ರದಾಯ ಧಾರ್ಮಿಕ ಪದ್ದತಿಗಳು ಆಚರಣೆ ಮಾಡುವದರಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಅಲ್ಲದೆ ಸಮಾಜದಲ್ಲಿ ಒಂದೇ ಕುಟುಂಬದ ಸದಸ್ಯರು ರೂಪದಲ್ಲಿ ಸಮಾಜದಲ್ಲಿ ಸಮಾನತೆ ಸಹೋದರತೆಯಿಂದ ಸುಂದರ ಬದುಕು ಕಟ್ಟಿಕೊಂಡು ನುಡಿದಂತೆ ನಡೆಯ ಬೇಕು ಎಂದರು.
ಶ್ರೀಶೈಲ ಗುರಲಿಂಗಯ್ಯ ಹಿರೇಮಠ ಮಾತನಾಡಿ, ನಮ್ಮ ಮನೆಯ ಹಿರಿಯರ ಆಶೆಯಂತೆ ನಾವು ಪ್ರತಿ ವರ್ಷ ಪುರಾಣ ಹಾಗೂ ಮುತ್ಯಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸುವ ಮೂಲಕ ಹಿರೇಮಠದಲ್ಲಿ ಶ್ರೀದೇವಿಯ ಆರಾದನೆಗಾಗಿ ಒಂಭತ್ತು ದಿನಗಳ ಕಾಲ ಶ್ರೀದೇವಿ ಮೂರ್ತಿಗೆ ಶೃದ್ಧಾ ಭಕ್ತಿಯಿಂದ ಪೂಜಿಸಿ ಶ್ರೀ ದೇವಿಯ ಮಹಿಮೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪ್ಪಜಲಪುರ ತಾಲೂಕಿನ ಹಳ್ಯಾಳ . ಚಿಕ್ಕಸಿಂದಗಿ. ಸಿಂದಗಿ. ಬ್ಯಾಕೋಡ.ಗೋಲಗೇರಿ.
ಡಂಬಳ. ಮೈಲೇಶ್ವರ. ಬಂದಾಳ .ಬೂದಿಹಾಳ ಪಿ ಹೆಚ್ . ಇಂಗಳೇಶ್ವರ. ದಿಂಡವಾರ. ಬಂಟನೂರ. ಕೋರಳ್ಳಿ. ತಾಳಿಕೋಟಿ. ಮುದ್ದೇಬಿಹಾಳ. ಗದಗ .ತುಂಬಗಿ. ಕಾಮನಕೇರಿ ಬೂದಿಹಾಳ .ಅಲ್ಲಾಪೂರದ ಸರ್ವ ಭಕ್ತರು ಭಾಗವಹಿಸಿ 1265 ಮುತೈದೆಯರಿಗೆ ಉಡಿ ತುಂಬಿ ತದನಂತರ ಮಾಹಾ ಪ್ರಸಾದ ನೇರವೇರಿತು.ಅಂದು ಸಂಜೆ ಮನರಂಜನೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಈರಯ್ಯ ಹಿರೇಮಠ,ಶಂಕ್ರಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ದಾನಯ್ಯ ಎಂ ಹಿರೇಮಠ,ದಾನಯ್ಯ ಹಿರೇಮಠ, ಗ್ರಾಮದ ಚಿಕ್ಕ ಸಿಂದಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ಅಧ್ಯಕ್ಷ ಶ್ರೀಶೈಲಯ್ಯ ಹಿರೇಮಠ. ಗಂಗಯ್ಯ ಶಿ ಹಿರೇಮಠ. ರಾಜೇಂದ್ರಯ್ಯ ಹಿರೇಮಠ. ಬಸಲಿಂಗಯ್ಯ ಹಿರೇಮಠ. ಗುಂಡಯ್ಯ ಹಿರೇಮಠ. ರಾಘವೇಂದ್ರಯ್ಯ ಹಿರೇಮಠ. ಮಳೇಂದ್ರಯ್ಯ ಹಿರೇಮಠ. ದಾನಯ್ಯ ಶ ಹಿರೇಮಠ. ಗುರುಸಂಗಯ್ಯ ಹಿರೇಮಠ. ಶಿವುಕುಮಾರ ಹಿರೇಮಠ. ವಿನಯ ಹಿರೇಮಠ ಭಾಗವಹಿಸಿದರು.