spot_img
spot_img

ಗುರುವಿನ ಮಹತ್ವ

Must Read

- Advertisement -

ಹೇಳಿದ್ದೆ ಹೇಳುವರು ಕೇಳಿದ್ದೆ ಕೇಳುವರು                    ಹೇಳಿದ್ದೆ ಕೇಳಿ ಸುಖಿಸುವರು ಗುರುವಿನಾ                ಹೇಳಿಕೆಯೆ ಬೇರೆ ಸರ್ವಜ್ಞ

ಅದೆ ಪುರಾಣ ಪುಣ್ಯಕಥೆ ಶಾಸ್ತ್ರಗಳನ್ನು‌‌ ಒಳಗಿನ ತಿರುಳು
ಅರಿಯದೆ ಮತ್ತು ಆಚಾರಕ್ಕೆ ತರದೆ ಬರಿದೆ ಹೇಳುವರು ಮತ್ತು ಕೇಳುವರು. ಅದನ್ನೆ ಹೇಳಿ ಕೇಳಿ ಬರಿದೆ ಖುಷಿಪಡುವರು. ಆದರೆ ಅದರ ಮರ್ಮ ಅರಿತು ಸಾಧಿಲಾರರು. ಗುರುದೇವನು ಸಾಧಿಸುವ ರೀತಿ ಹೇಳಿಕೊಡುವ ಬಗೆಯೆ ಬೇರೆಯಿದೆ.ಆತನ
ಬೋಧನೆಯಂತೆ ಸಾಧಿಸಿದರೆ ಸಿದ್ಧಿಸುವುದು ಎಂದು ಸರ್ವಜ್ಞ
ಕವಿ‌ ಗುರುವಿನ ಮಹತ್ವದ ಬಗ್ಗೆ ಹೇಳಿದ್ದಾನೆ

ಲಿಂಗದ ಮಹತ್ವ

- Advertisement -

ಆಗಿಲ್ಲ ಹೋಗಿಲ್ಲ‌ ಮೇಗಿಲ್ಲ ಕೆಳಗಿಲ್ಲ
ತಾಗುತಪ್ಪು ತಡಿಯಿಲ್ಲ ಲಿಂಗಕ್ಕೆ
ದೇಗುಲವೆಯಿಲ್ಲ ಸರ್ವಜ್ಞ

ಆಗಿಲ್ಲವೆಂದರೆ ಲಿಂಗಕ್ಕೆ ಜನನವಿಲ್ಲ. ಹೋಗಿಲ್ಲ ಎಂದರೆ
ಅದು ಸತ್ತುಹೋಗಿಲ್ಲ. ಅದು ಅಮರ ಶಾಶ್ವತವಾದದ್ದು. ಮೇಲಿಲ್ಲ ಕೆಳಗಿಲ್ಲ ಎಂದರೆ ಎಲ್ಲಾ ಕಡೆಗೆ ತುಂಬಿ ತುಳುಕುತ್ತಿದೆ.
ತಾಗುತಪ್ಪುತಡೆಯಿಲ್ಲ ಎಂದರೆ ಅದಕ್ಕೆ ಕಳಂಕವಾಗಲಿ, ಮಲಿನವಾಗಲಿ ಇಲ್ಲ. ಸದಾ ನಿರ್ಮಲವಾದದ್ದು. ಮಡಿಮೈಲಿಗೆ ಇಲ್ಲದ ಲಿಂಗವನ್ನು ಯಾರು ಬೇಕಾದರು ಪೂಜಿಸಬಹುದು. ಯಾವಾಗ ಬೇಕಾದರು ಪೂಜಿಸಬಹುದು. ಇಡೀ ಜಗತ್ತಿನಲ್ಲಿ ತುಂಬಿರುವ ಲಿಂಗವನ್ನು ಗುಡಿಯಲ್ಲಿಟ್ಟು ಬಂಧಿಸಲು ಸಾಧ್ಯವಿಲ್ಲ. ಅದು ಹೊರಗು ಇದೆ ಒಳಗು ಇದೆ. ಎಲ್ಲಲ್ಲಿ ತುಂಬಿ ತುಳುಕುತ್ತಿದೆ. ಅದು ಚೈತನ್ಯಶಕ್ತಿ. ಅಪರಿಮಿತವಾದುದು.
ಹೀಗೆ ಲಿಂಗದ ಮಹತ್ವವನ್ನು ಸರ್ವಜ್ಞ ತಿಳಿಸಿದ್ದಾನೆ.

ಜಂಗಮ ಅಥವಾ ಯೋಗಿಯ ಮಹತ್ವ

- Advertisement -

ನವರಂಧ್ರವ ಮುಚ್ಚಿ ಶಿವಧ್ಯಾನದೊಳಿರಲು
ನವಖಂಡ ಪೃಥ್ವಿಯೊಳಗಣ ಮಾತೆಲ್ಲ
ಕಿವಿಯೊಳಗೆಯಿಹುದು ಸರ್ವಜ್ಞ

ಹತ್ತು ಇಂದ್ರಿಯಗಳನ್ನು ( ಕಣ್ಣು,ಕಿವಿ, ಮೂಗು, ನಾಲಿಗೆ, ಚರ್ಮ, ಕಾಲು, ಕೈ, ಬಾಯಿ, ಪಾಣಿ, ಮಾಣಿ)ಮುಚ್ಚಿ ಮತ್ತು ಹತ್ತು ರಂಧ್ರಗಳನ್ನು (೨ ಕಣ್ಣು, ೨ ಕಿವಿ, ೨ ಮೂಗಿನ‌ ಹೊರಳೆ ,೧ ಬಾಯಿ, ೧ ಜನನೇಂದ್ರಿಯ,೧ ಗುದದ್ವಾರ) ಮುಚ್ಚಿ ಶಿವಧ್ಯಾನ‌ ಮಾಡಿದರೆ ಏಳು ಖಂಡದಲ್ಲಿ ಅಂದರೆ ಪ್ರಪಂಚದಲ್ಲಿ ನಡೆಯುವ ಎಲ್ಲ ವಿಷಯಗಳು ತಿಳಿಯುತ್ತವೆ ಎಂದು ಸರ್ವಜ್ಞ ಜಂಗಮರ ಅಥವಾ ಯೋಗಿಗಳ ಮಹತ್ವವನ್ನು ಸಾರಿದ್ದಾನೆ.

ಎನ್.ಶರಣಪ್ಪ‌ ಮೆಟ್ರಿ ಗಂಗಾವತಿ

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group