ಆ.1 ರಂದು ಕಸಾಪ ಪದಾಧಿಕಾರಿಗಳ ಪದಗ್ರಹಣ ; ಕರಪತ್ರ ಬಿಡುಗಡೆ

Must Read

ಸಿಂದಗಿ: ಆ. 1 ರಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಹಾಗೂ ಪುರಸಭೆ ಉಪಾದ್ಯಕ್ಷ ಹಾಸಿಂಪೀರ ಆಳಂದ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಮನೆಂಗಳದಲ್ಲಿ ಬೆಳಗಬೇಕು ಎನ್ನುವ ನಿಟ್ಟಿನಲ್ಲಿ ಪದಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಿ ಜವಾಬ್ದಾರಿಯನ್ನು ವಹಿಸಲಾಗಿದ್ದು ಗ್ರಾಮೀಣ ಮಟ್ಟದಲ್ಲಿ ಅಡಗಿರುವ ಪ್ರತಿಭೆಗಳು ಕನ್ನಡ ಸಾಹಿತ್ಯ ಪರಿಷತ್ತು ಪರಿಚಯಿಸುವಂಥ ಕಾರ್ಯ ನಡೆಯಲು ಎಲ್ಲರು ಕಾರ್ಯಪ್ರವೃತರಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಅಧ್ಯಕ್ಷ ರಾಜಶೇಖರ ಕೂಚಬಾಳ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ತಮ್ಮಣ್ಣ ಈಳಗೇರ, ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ಶಾರದಾ ಮಂಗಳೂರ, ಖಾದರಬಾಶಾ ಬಂದಾಳ, ರಮೇಶ ಪೂಜಾರಿ, ಸಾಯಬಣ್ಣ ಪುರದಾಳ, ಪಂಡಿತ ಯಂಪೂರೆ, ಶಾಂತೂ ರಾಣಾಗೋಳ, ಶಿವಾನಂದ ಬಡಾನೂರ ಸೇರಿದಂತೆ ಅನೇಕರು ಇದ್ದರು.

Latest News

ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ.

ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ...

More Articles Like This

error: Content is protected !!
Join WhatsApp Group