spot_img
spot_img

ನಾಳೆ ಹಾಲು ಶಿಥಿಲೀಕರಣ ಘಟಕ ಉದ್ಘಾಟನೆ

Must Read

- Advertisement -

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹಳ್ಳೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಎನ್‌ಪಿಡಿಡಿ ಯೋಜನೆಯಡಿಯಲ್ಲಿ ಹಾಲು ಶಿಥಿಲೀಕರಣ (ಬಿಎಮ್‌ಸಿ) ಘಟಕದ ಉದ್ಘಾಟನಾ ಸಮಾರಂಭದ ಆ.20ರಂದು ಮುಂಜಾನೆ 90:30ಕ್ಕೆ ಸಂಘದ ಆವರಣದಲ್ಲಿ ಜರುಗಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಸಾನ್ನಿಧ್ಯವನ್ನು ಬೆಂಡವಾಡ ವಿರಕ್ತ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ವಹಿಸುವವರು. ಉದ್ಘಾಟಕರಾಗಿ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಬೆಳಗಾವಿ ಕೆಎಮ್‌ಎಫ್ ಅಧ್ಯಕ್ಷ ಹಾಗೂ ವಿಧಾನ ಪರಿಷತ ಸದಸ್ಯ ವಿವೇಕರಾವ ಪಾಟೀಲ. ಮುಖ್ಯ ಅತಿಥಿಗಳಾಗಿ ಬೆ.ಜಿ.ಹಾ. ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಬೆ.ಹಾ. ಒಕ್ಕೂಟದ ವ್ಯೆವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್ ಹಾಗೂ ಅನೇಕ ಅಧಿಕಾರಿಗಳು ಮತ್ತು ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ಹಳ್ಳೂರ ಗ್ರಾಮದ ಸರ್ವ ಹಾಲು ಉತ್ಪಾದಕರ ಸಂಘದ ಸದಸ್ಯರು, ಗ್ರಾಮದ ಗುರು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎಂದು ಸಂಘದ ಅಧ್ಯಕ್ಷ ಶ್ರೀಶೈಲ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group