ಸಿಂದಗಿ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಯಡ್ರಾಮಿ ಹೇಳಿದರು.
ಪಟ್ಟಣದಲ್ಲಿ ರವಿವಾರ ಪತ್ರಿಕಾ ಹೇಳಿಕೆ ನೀಡಿದ ಹೇಳಿದ ಅವರು, ಸಿಂದಗಿ, ಆಲಮೇಲ, ದೇವರಹಿಪ್ಪರಗಿ ತಾಲೂಕಿನ ಬರುವ ಎಲ್ಲ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು, ಶಿಕ್ಷಕರು 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಪೂರ್ವ ಸಿದ್ದತೆ ಮಾಡಿಕೊಳ್ಳ ಬೇಕು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಬೇಕು. ಈ ವರ್ಷ ಈಗಾಗಲೇ ಪುಸ್ತಕ ಬಂದಿವೆ. ಒಟ್ಟಾಗಿ ಮೇ 29ರಂದು ಶಾಲೆ ಪ್ರಾರಂಭೋತ್ಸವದೊಂದಿಗೆ ಪ್ರಾರಂಭಿಸಬೇಕು. ಶಾಲೆ ಪ್ರಾರಂಭವಾಗುವ ಮುಂಚೆ ಅಡುಗೆ ಸಿಬ್ಬಂದಿ ಕರೆಸಿ ಎಲ್ಲ ಪಾತ್ರೆ ಪರಿಕರ ಮತ್ತು ಅಕ್ಕಿ, ಬೇಳೆ, ತರಕಾರಿ ಸ್ವಚ್ಚ ಮಾಡಿಕೊಂಡು ಸಿಹಿ ಊಟದೊಂದಿಗೆ ಶಾಲೆ ಪ್ರಾರಂಭಿಸ ಬೇಕು ಎಂದರು.
ಮೇ 29 ರಂದು ಹಮ್ಮಿಕೊಳ್ಳುವ ಶಾಲಾ ಪ್ರಾರಂಭೋತ್ಸವಕ್ಕೆ ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ನಾಗರಿಕರು ವಿದ್ಯಾರ್ಥಿಗಳನ್ನು ಗಣ್ಯ ಅತಿಥಿಗಳ ಹಾಗೆ ವಿಶೇಷವಾಗಿ ಬರಮಾಡಿ ಕೊಳ್ಳಬೇಕು. ಮೊದಲ ದಿನ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸಿಹಿ ವಿತರಿಸಬೇಕು ಎಂದು ಬಿಇಓ ತಿಳಿಸಿದ್ದಾರೆ.