ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಅಚರಿಸಲಾಯಿತು.
ಧ್ವಜಾರೋಹಣದ ನಂತರ ಗ್ರಾಮದಲ್ಲಿ ನಡೆದ ಪ್ರಭಾತಪೇರಿಯಲ್ಲಿ ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ವೇಷದಲ್ಲಿನ ಮಕ್ಕಳು ಎಲ್ಲರ ಗಮನ ಸೆಳೆದರು. ಗ್ರಾಮದ ಮಾಜಿ ಯೋಧರಾದ ವೆಂಕಣ್ಣ ಬಡಿಗೇರ, ಅರ್ಜುನ ನಿಂಬಾಳಕರ, ದುಂಡಪ್ಪ ಮಡಿವಾಳರ, ರವೀಂದ್ರ ಮನಗುತ್ತಿ, ಗಂಗಪ್ಪ ಅರವಟಗಿ, ಉಮೇಶ ಕಾರಿಮನಿ, ಸಿದ್ದಪ್ಪ ಮನಗುತ್ತಿ, ಸಾಯಿರಾಬಾನು ವಕ್ಕುಂದ ಭಾಗಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಮಾತನಾಡಿ, ದೇಶದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರ ತ್ಯಾಗ ಬಲಿದಾನವನ್ನು ಮರೆಯಬಾರದು ಎಂದರು. ಭಾಷಣ ಹಾಗೂ ದೇಶಭಕ್ತಿ ಗೀತೆಗಳ ಮೂಲಕ ವಿದ್ಯಾರ್ಥಿಗಳು ಭವ್ಯ ಭಾರತದ ಹಿರಿಮೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಪದಾಧಿಕಾರಿಗಳಾದ ವಿನಾಯಕ ಬಡಿಗೇರ, ಮಹಾಂತೇಶ ಸೊಗಲದ, ನಿಂಗಪ್ಪ ಅಳಗೋಡಿ, ರಮೇಶ ಸೂರ್ಯವಂಶಿ, ಯಲ್ಲಪ್ಪ ಕುರಿ, ಶಿವಾನಂದ ಚಚಡಿ, ಗಂಗಪ್ಪ ಆಡಿನ, ಉಮೇಶ ಬೋಬಡೆ, ಬಸವರಾಜ ಸೊಗಲದ, ಫಕ್ಕೀರಪ್ಪ ಯರಗೊಪ್ಪ, ಬಾಬು ಕುಲಕರ್ಣಿ, ಈರಪ್ಪ ಗರಗದ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ಕುಮಾರ ಯರಗಂಬಳಿಮಠ, ಮಂಜುಳಾ ಕಾಳಿ, ಪವಿತ್ರಾ ಸೊಗಲದ, ಡಿ ಎ ಬಾಗೇವಾಡಿ, ವಿ.ಎಮ್. ಕುರಿ, ಕೆ.ಎಚ್. ತಂಗೊಂಡರ, ಟಿ.ಎಸ್. ಮಾದರ, ಆರ್.ಬಿ. ಚಚಡಿ, ಶೋಭಾ ರೊಟ್ಟಿ, ಸಾವಿತ್ರಿ ಮುನವಳ್ಳಿ, ಗಂಗವ್ವ ಅಳಗೋಡಿ, ಮಹಾದೇವಿ ಸೊಗಲದ, ಜ್ಯೋತಿ ಅಳಗೋಡಿ, ಅಜಯ ಹಳ್ಳಿಕೇರಿಮಠ, ರಾಮು ಮೆಕ್ಕೇದ, ಮಹಾಂತೇಶ ಅಗಸಿಮನಿ, ಮಹಾಂತೇಶ ಯರಗೊಪ್ಪ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಪೂರ್ತಿ ಕುಲಕರ್ಣಿ ನಿರೂಪಿಸಿದರು. ಸುಪ್ರಿಯಾ ಕುಲಕರ್ಣಿ ಸ್ವಾಗತಿಸಿದರು. ಭಾಗ್ಯಶ್ರೀ ಬಡಿಗೇರ ವಂದಿಸಿದರು.