ಸಡಗರ ಸಂಭ್ರಮದಿಂದ ಜರುಗಿದ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ

Must Read

ಮೂಡಲಗಿ: ಪಟ್ಟಣದ ಗಾಂಧೀ ಚೌಕ ಹತ್ತಿರದ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಸ್ಥಳಿಯ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿತು.

ಸೋಮವಾರ ಮುಂಜಾನೆ ಬಸವೇಶ್ವರ ಕಲ್ಯಾಣ ಮಂಟಪದಿಂದ ಕುಂಭ ಮೇಳ, ಆರತಿ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದ ಸಂಗಪ್ಪ ವೃತ್ತ, ಕಲ್ಮೇಶ್ವ ವೃತ್ತ, ಚನ್ನಮ್ಮ ವೃತ್ತ, ಗಾಂಧಿ ಚೌಕ ಮಾರ್ಗವಾಗಿ ದೇವಸ್ಥಾನದವರಿಗೆ ಶ್ರೀ ಲಕ್ಷ್ಮೀದೇವಿ ಮೆರವಣಿಗೆ ಜರುಗಿತು.

ದೇವಸ್ಥಾನದ ಆವರಣದಲ್ಲಿ ಹೋಮ ಹವನಗಳೊಂದಿಗೆ ಲಕ್ಷ್ಮೀದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ  ಮಹಾಪ್ರಸಾದ ಜರುಗಿತು. 

ಈ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮಲ್ಲಿಕಾರ್ಜುನ ಢವಳೇಶ್ವರ, ಚನ್ನಪ್ಪ ಢವಳೇಶ್ವರ, ಬಿಡಿಸಿಸಿ ಬ್ಯಾಂಕ್ ಸತೀಶ ಕಡಾಡಿ, ಗಿರೀಶ ಢವಳೇಶ್ವರ, ಡಾ.ಅನೀಲ ಪಾಟೀಲ, ಈರಪ್ಪ ಸತರಡ್ಡಿ, ಪ್ರದೀಪ ಪೂಜೇರಿ, ಉಮೇಶ ಗಿರಡ್ಡಿ,  ಸುಭಾಸ ಜೇನಕಟ್ಟಿ, ವಿನಾಯಕ ಮಂದ್ರೋಳಿ, ಸದಾಶಿವ ನಿಡಗುಂದಿ, ಸುಪ್ರೀತ ನಿಡಸೋಶಿ, ಮಹಾಂತೇಶ ಖಾನಾಪೂರ, ರಮೇಶ ಪಾಟೀಲ, ಉದಯ ಬಡಿಗೇರ, ಸದಾಶಿವ ಬಗಾಡಿ, ಭರತೇಶ ಬೆಳವಿ ಮತ್ತು ದೇವಸ್ಥಾನ ಅರ್ಚಕರಾದ ಸಾಂವಕ್ಕಾ ಬಾಗೋಜಿ ಹಾಗೂ ಲಕ್ಷ್ಮೀದೇವಿ ಭಕ್ತರು ಇದ್ದರು.

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group