ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ; ವಿಕಲಚೇತನನಿಂದ ಅಳಿಲು ಸೇವೆ

Must Read

ಬೀದರ: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೀದರ ನಲ್ಲಿ ಟೀ ಅಂಗಡಿ ಮಾಡಿಕೊಂಡು  ಜೀವನ ನಡೆಸುತ್ತಿದ್ದ ರಾಮ ಭಕ್ತ ಸ್ವತಃ ಅಂಗವಿಕಲನಾಗಿದ್ದರೂ ರಾಮಲಲ್ಲಾನ ಸೇವೆಯಾಗಿ ತನ್ನ ಅಳಿಲು ಸೇವೆ ಸಲ್ಲಿಸಿದ್ದಾನೆ.

ನಗರದ ನೆಹರು ಕ್ರೀಡಾಂಗಣ ಹತ್ತಿರ ಟೀ ಸ್ಟಾಲ್ ನಡೆಸುತ್ತಿರೋ ಅಂಗವಿಕಲನಾಗಿರುವ ನಾಗಶೆಟ್ಟಿ ಮಾಶೆಟ್ಟಿ ಅಯೋಧ್ಯಾ ಉತ್ಸವದ ಹಿನ್ನೆಲೆಯಲ್ಲಿ ಜನರಿಗೆ ಉಚಿತವಾಗಿ ಚಾ, ಬಿಸ್ಕೆಟ್, ವಾಟರ್ ಬಾಟಲ್ ವಿತರಣೆ ಮಾಡಿದರು.

ಬಾಲ್ಯದಿಂದಲೇ ರಾಮಭಕ್ತನಾಗಿರುವ ನಾಗಶೆಟ್ಟಿ ಮಾಶೆಟ್ಟಿ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದು ಇಂದು ಕೂಡ ತನ್ನ ಟೀ ಸ್ಟಾಲ್ ಗೆ ಬರುವ ಪ್ರತಿಯೊಬ್ಬರಿಗೆ ಅಳಿಲು ಸೇವೆಯಾಗಿ ಚಹಾ,ನೀರಿನ ಬಾಟಲ್, ಬಿಸ್ಕೆಟ್ ಉಚಿತವಾಗಿ ವಿತರಣೆ ಮಾಡುತ್ತಿದ್ದರು.

‘ಅಯೋಧ್ಯೆಗೆ ತೆರಳಿ ಶ್ರೀ ರಾಮನಿಗೆ ಸೇವೆ ಸಲ್ಲಿಸೊದು ಅಸಾಧ್ಯದ ಮಾತು ಹಾಗಾಗಿ ಇಲ್ಲಿಂದಲೇ ರಾಮನಿಗೆ ಅಳಿಲು ಸೇವೆಯಾಗಿ ಕೈಲಾಗುವ ಅಳಿಲು ಸೇವೆ ಮಾಡ್ತಿದ್ದೇನೆ’ ಎಂದು ರಾಮಭಕ್ತ ನಾಗಶೆಟ್ಟಿ ಪತ್ರಿಕೆಗೆ ತಿಳಿಸಿದರು. 

ಇವರ ಅಳಿಲು ಸೇವೆಗೆ  ಸಾರ್ವಜನಿಕರೂ ‌ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group