ಬೀದರ್ ನಲ್ಲಿ ಐ ಪಿ ಎಲ್ ಬುಕ್ಕಿ ಬಂಧನ

Must Read

ಬೀದರ: ಎರಡು ದಿವಸಗಳ ಹಿಂದಷ್ಟೇ ಶುರುವಾಗಿರುವ ಐ ಪಿ ಎಲ್ ಕ್ರಿಕೆಟ್ ಪಂದ್ಯಾವಳಿಗಳ ಹಿಂದೆಯೇ ಬೆಟ್ಟಿಂಗ್ ದಂಧೆ ಬಿಚ್ಚಿಕೊಂಡಿದ್ದು ಒಬ್ಬ ಬೆಟ್ಟಿಂಗ್ ಬುಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ

ಈ ಮೊದಲೇ ಐ ಪಿ ಎಲ್ ಬುಕ್ಕಿಯ ಮೇಲೆ ಕಣ್ಣಿಟ್ಟಿದ್ದ ಪೊಲೀಸ್ ಇಲಾಖೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹುಮನಾಬಾದ್ ನ ಆತನ ಮನೆಯ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಹಲವು ಬುಕ್ಕಿಂಗ್ ಮಾಡುವ ಹಲವು ಸಾಮಗ್ರಿಗಳಾದ ಎಂಟು ಮೊಬೈಲ್ ಗಳು ಒಂದು ಲ್ಯಾಪ್‌ಟಾಪ್, ರೂ. 1,05,500 ನಗದು ಹಣವನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಮತ್ತು ಹುಮನಾಬಾದ ಡಿವೈಸ್ ಪಿ ನೇತೃತ್ವದಲ್ಲಿ ಈ ದಾಳಿ ಮಾಡಿ ಹುಮನಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....

More Articles Like This

error: Content is protected !!
Join WhatsApp Group