ಮೂಡಲಗಿ – ಅಸಂಘಟಿತ ಕಾರ್ಮಿಕರಿಗೆ ಬರಬೇಕಾದ ೫೦೦೦ ಕಿಟ್ ಗಳಲ್ಲಿ ಕೆಲವು ದೋಷಪೂರಿತ ಹಂಚಿಕೆಯಾಗಿವೆ. ಚುನಾಯಿತ ಪ್ರತಿನಿಧಿಗಳ ಮನೆಗಳಿಗ, ಶ್ರೀಮಂತರ ಮನೆಗಳಿಗೆ ಹೋಗಿವೆ
ನಿಜವಾದ ಫಲಾನುಭವಿಗಳಿಗೆ ತುಲುಪುತ್ತಿಲ್ಲ ಎಂದು ಯುವ ಕಾಂಗ್ರೆಸ್ ಮುಖಂಡ ಗುರು ಗಂಗಣ್ಣವರ ಆರೋಪಿಸಿದರು.
ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಅವರು ಮಾತನಾಡಿದರು.
ಶಾಸಕರು, ರಾಜ್ಯ ಸಭಾ ಸದಸ್ಯರು ಕಿಟ್ ಗಳನ್ನು ಹಂವಿ ಹೋದ ನಂತರ ಕಿಟ್ ಗಳ ದುರುಪಯೋಗ ಆಗುತ್ತಿದೆ.ಆಶಾ ಕಾರ್ಯಕರ್ತೆ ಯರಿಗೆ, ಪೌರ ಕಾರ್ಮಿಕರಿಗೆ ಕೊಡಲಾಗುತ್ತಿದೆ.
ನಿಜವಾಗಲೂ ಅಸಂಘಟಿತ ಕಾರ್ಮಿಕರಿಗೆ ಕಿಟ್ ನೀಡಬೇಕು. ಇನ್ನು ಮುಂದಾದರೂ ಶಾಸಕಾರಾಗಲಿ, ಸಂಸದರಾಗಲಿ, ಕಾರ್ಮಿಕ ಇಲಾಖೆಯವರಾಗಲಿ ಕಿಟ್ ಗಳನ್ನು ಸರಿಯಾದ ಫಲಾನುಭವಿಗಳಿಗೆ ಹಂಚಬೇಕು ಎಂದು ನಮ್ಮ ಆಗ್ರಹ ಎಂದರು.
ಅಸಂಘಟಿತ ಕಾರ್ಮಿಕರ ಬಗ್ಗೆ ಮಾಹಿತಿ ಗ್ರಾಮ ಪಂಚಾಯತಿಯಲ್ಲಿ ಸಿಗುತ್ತದೆ. ಅದನ್ನು ಪಡೆದುಕೊಂಡು ಸರಿಯಾದ ಜನರಿಗೆ ಆಹಾರ ಕಿಟ್ ಹಂಚಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನಾಗನೂರ ಪಂಚಾಯತಿಯಲ್ಲಿ ಜಾತಿ ಆಧಾರಿತವಾಗಿ ಕಿಟ್ ಗಳನ್ನು ಹಂಚುವ ಅವ್ಯವಹಾರ ನಡೆದಿದೆ. ಇದು ರಾಜ್ಯಸಭಾ ಸದಸ್ಯರಿಗೂ ಗೊತ್ತಿದೆ, ಶಾಸಕರಿಗೂ ಗೊತ್ತಿದೆ ಆದರೂ ಅವರು ಕೇಳುತ್ತಿಲ್ಲ.
ಎಲ್ಲ ಹಳ್ಳಿಗಳಿಗೂ ಸಿಗುತ್ತಿಲ್ಲ. ತಮಗೆ ಅನುಕೂಲಕರವಾದ ಕೆಲವೇ ಹಳ್ಳಿಗಳಿಗೆ ಮಾತ್ರ ಕಿಟ್ ಕೊಡುತ್ತಿದ್ದಾರೆ ಎಂದು ಗುರು ಗಂಗಣ್ಣವರ ಆರೋಪಿಸಿದರು.