Ishwar Khandre Bidar: ತಪ್ಪು ತಪ್ಪು ಉತ್ತರ ನೀಡಿದ ಶಿಕ್ಷಕ, ಮಕ್ಕಳು; ಖಂಡ್ರೆಗೆ ಮುಜುಗರ

Must Read

ಬೀದರ – ದೇಶದ ರಾಷ್ಟ್ರಪತಿ ಯಾರು ಎಂದು ಕೇಳಿದರೆ ನರೇಂದ್ರ ಮೋದಿ ಎಂದು ಉತ್ತರ ಕೊಟ್ಟ ಮಕ್ಕಳು.

ರಾಜ್ಯದಲ್ಲಿ ಜಿಲ್ಲೆಗಳು ಎಷ್ಟಿವೆ ಎಂದು ಕೇಳಿದರೆ ತಪ್ಪು ಉತ್ತರ ನೀಡಿದ ಶಿಕ್ಷಕ, ಇದರಿಂದ ಮುಜುಗರಕ್ಕೆ ಒಳಗಾದ ಸಚಿವ ಈಶ್ವರ ಖಂಡ್ರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದ ಸರಕಾರಿ ಶಾಲೆಗೆ ಸಚಿವರು ಭೆಟ್ಟಿ ಕೊಟ್ಟಾಗ ಈ ಪ್ರಸಂಗ ನಡೆಯಿತು.

ಶಿಕ್ಷಕ ಹಾಗೂ ಮಕ್ಕಳ ಉತ್ತರಕ್ಕೆ ಸಚಿವ ಅರಣ್ಯ ಸಚಿವ ಈಶ್ವರ ಖಂಡ್ರೆ  ಮುಜುಗರಗೊಂಡು ಶಿಕ್ಷಕರಿಗೆ ಗೊತ್ತಿಲ್ಲ ಅಂದ್ರೆ ಹೇಗಪ್ಪ ಮಕ್ಕಳಿಗೆ ಏನ ಕಲಿಸಿಕೊಡುತ್ತೀರಿ ಎಂದು ಕೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಪಠ್ಯಗಳನ್ನು ಬದಲಾಯಿಸಲು ಸಿದ್ಧವಾಗಿರುವ ಕಾಂಗ್ರೆಸ್ ಸರ್ಕಾರವು ಶಾಲೆಗಳಲ್ಲಿ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಸಿಗುತ್ತಿದೆ ಎಂಬ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಶಿಕ್ಷಕರೂ ಕೂಡ ತಪ್ಪು ಉತ್ತರ ನೀಡುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ಸಂದೇಹ ಪಡುವಂತಾಗಿದೆ. ನೂತನ ಶಿಕ್ಷಣ ಸಚಿವರು ಈ ಬಗ್ಗೆ ಯಾವಾಗ ಗಮನಗರಿಸುತ್ತಾರೆ ಕಾದು ನೋಡಬೇಕು. ಬಿಜೆಪಿ ಸರ್ಕಾರದ ಕಾಲದ ಪಠ್ಯವನ್ನು ಬದಲಾಯಿಸಲು ಬಿಜಿಯಾಗಿರುವ ಶಿಕ್ಷಣ ಸಚಿವರು ಈ ವ್ಯವಸ್ಥೆಯ ಬದಲಾವಣೆಗೆ ನಿಂತರೆ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬಹುದು.


ವರದಿ: ನಂದಕುಮಾರ ಕರಂಜೆ, ಬೀದರ

 

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group