ನಮ್ಮ ಗ್ಯಾರಂಟಿಗಳಿಗೆ ಜಯ ಸಿಕ್ಕಿದೆ – ಈಶ್ವರ ಖಂಡ್ರೆ

Must Read

ಬೀದರ – ಮುಡಾ, ವಕ್ಫ್ ಬಗ್ಗೆ ಪ್ರತಿಪಕ್ಷಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದರು. ಆ ಸುಳ್ಳು‌ ಆರೋಪಗಳಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಈಶ್ವರ ‌ಖಂಡ್ರೆ ಹೇಳಿದ್ದಾರೆ.

ಬೀದರ್‌ನ ಬಸವಕಲ್ಯಾಣ ಪಟ್ಟಣದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪತ್ರಕರ್ತರೊಡನೆ ಮಾತನಾಡುತ್ತ, ನಮ್ಮ ಗ್ಯಾರಂಟಿಗಳಿಗೆ‌ ಜಯ ಸಿಕ್ಕಿದೆ, ಜಾತ್ಯತೀತ ‌ವಿಚಾರಗಳಿಗೆ‌ ಜಯ ಸಿಕ್ಕಿದೆ ಆದ್ದರಿಂದಲೇ ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಮತದಾರರು ನಮ್ಮ ಕೈ ಹಿಡಿದಿದ್ದಾರೆ.ಮೂರೂ ಕ್ಷೇತ್ರದಲ್ಲಿ ನಮಗೆ ಭರ್ಜರಿ ಗೆಲವು ತಂದು ಕೊಟ್ಟಿದ್ದಾರೆ ಎಂದರು

ಬಿಜೆಪಿ ಜೆಡಿಎಸ್ ಅನೈತಿಕ ‌ಸಂಬಂಧಕ್ಕೆ ಇದು ತಕ್ಕ ಉತ್ತರವಾಗಿದೆ. ವಿಶೇಷವಾಗಿ ಶಿಗ್ಗಾಂವಿ ಮತದಾರರು ಜಾತ್ಯತೀತವಾಗಿ ಮತಹಾಕಿದ್ದಾರೆ. ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿದರೂ ನಮ್ಮ ಅಭ್ಯರ್ಥಿ ಯಾಸೀರ್ ಖಾನ್ ಗೆದ್ದಿದ್ದಾರೆ ಸತ್ಯಕ್ಕೆ ಜಯವಾಗಿದೆ ಈ ಮೂರು ಕ್ಷೇತ್ರದ ಗೆಲುವಿನಿಂದಾಗಿ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಸಿಕ್ಕಿದೆ ಎಂದು ಹೇಳಿದ ಖಂಡ್ರೆ, ಸಿದ್ದರಾಮಯ್ಯನವರ ನಾಯಕತ್ವಕ್ಕೆ ಜನ ಬೆಂಬಲಿಸಿದ್ದಾರೆ ಪ್ರತಿಪಕ್ಷ ಇನ್ನಾದರೂ ಬುದ್ದಿ ಕಲಿಯಲಿ. ನನ್ನ ‌ಪರವಾಗಿ ಮೂರು ಕ್ಷೇತ್ರದ ಮತದಾರರಿಗೆ ನಾನು‌ ಧನ್ಯವಾದ ‌ತಿಳಿಸುವೆ ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group