spot_img
spot_img

ಇಂದಿನ ಛಾಯಾಗ್ರಾಹಕರಿಗೆ ಬೆಲೆಯಿಲ್ಲದಂತಾಗಿದೆ – ಪಂಡಿತ್ ಯಂಪೂರೆ

Must Read

- Advertisement -

ಸಿಂದಗಿ: ಅಂದಿನ ಛಾಯಾಗ್ರಹಣಕ್ಕೂ ಇಂದಿನ ಛಾಯಾಗ್ರಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಆದಾಗ್ಯೂ ಅಂದಿನ ಛಾಯಾಗ್ರಾಹಕರಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು ಇಂದಿನ ಡಿಜಿಟಲ್ ಛಾಯಾಗ್ರಹಣ ಮುಂದುವರೆದರು ಕೂಡಾ ಇಂದಿನ ದೃಶ್ಯ ಮಾಧ್ಯಮಕ್ಕೆ ಮಾರುಹೋಗಿ ಬೆಲೆ ಸಿಗದಂತಾಗಿದೆ ಎಂದು ಯಂಪೂರೆ ಡಿಜಿಟಲ್ ಸ್ಟುಡಿಯೋ ಮಾಲೀಕ ಪಂಡಿತ ಯಂಪೂರೆ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ತಾಲೂಕು ಛಾಯಾಚಿತ್ರಗಾರರ ಸಂಘದ ವತಿಯಿಂದ ಹಿರಿಯ ಛಾಯಾಚಿತ್ರಕಾರರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಛಾಯಾ ಚಿತ್ರೀಕರಣ ನಿಂತಿಲ್ಲ ಅದು ಶಾಶ್ವತವಾಗಿದೆ ಅದನ್ನು ಬಳಕೆ ಮಾಡುವ ವಿಧಾನ ಬೇರೆಯಾಗಿದೆ ಅದಕ್ಕೆ ಅನುಗುಣವಾಗಿ ಬದಲಾವಣೆ ಹೊಂದಿ ಇಂದಿನ ಛಾಯಾ ಚಿತ್ರೀಕರಣಕ್ಕೆ ಹೊಂದಿಕೊಂಡು ಛಾಯಾ ಚಿತ್ರೀಕರಣವನ್ನು ಉಳಿಸಿ ಬೆಳೆಸೋಣ ಎಂದರು.

- Advertisement -

ಗೋಲಗೇರಿ ಕಲ್ಯಾಣಿ ಸ್ಟುಡಿಯೋ ಮಾಲೀಕ ಕಲ್ಲಪ್ಪ ಯಂಕಂಚಿ ಮಾತನಾಡಿ, ಬರೀ ರೂ ಸಾವಿರ ಬೆಲೆಯ ರೀಲ್ ಕ್ಯಾಮರಾದಿಂದ ಪ್ರಾರಂಭಿಸಿ ಛಾಯಾಚಿತ್ರಣ ನನ್ನ ಕುಟುಂಬ ಸಾಗಿಸಿದ್ದೇನೆ ಆದರೆ ಇಂದು ಲಕ್ಷಾನುಗಟ್ಟಲೆ ಬೆಲೆಯುಳ್ಳ ಕ್ಯಾಮಾರಾದಿಂದ ಉದ್ಯೋಗ ಪ್ರಾರಂಭಿಸಿದರು ಕೂಡಾ ಅಂಗಡಿ ಬಾಡಿಗೆಗೆ ಮತ್ತು ಖರ್ಚಿಗೆ ಸಾಲುತ್ತಿಲ್ಲ ಏಕೆಂದರೆ ಫೊಟೋಗ್ರಾಫರಗಳಲ್ಲಿ ಒಗ್ಗಟ್ಟಿನ ಕೊರತೆಯಿಂದ ಆರ್ಥಿಕತೆಯಿಂದ ಹಿಂದೆ ಬೀಳುತ್ತಿದ್ದೇವೆ ಕಾರಣ ನಾವೆಲ್ಲರು ಒಂದಾಗಿ ಒಗ್ಗಟ್ಟಿನಿಂದ ಸಂಘ ನಿರ್ಣಯಿಸಿದ ಒಂದೇ ಬೆಲೆಯಲ್ಲಿ ಉದ್ಯೋಗದಲ್ಲಿ ತೊಡಗಿದರೆ ಛಾಯಾ ಚಿತ್ರೀಕರಣ ಎಂದೂ ಬಡವಾಗುವುದಿಲ್ಲ ಎಲ್ಲರು ಒಂದೆ ತಾಯಿ ಮಕ್ಕಳ ಹಾಗೆ ಉದ್ಯೋಗ ಸಾಗಿಸಿ ತಮ್ಮ ಬದುಕನ್ನು ಸಾಗಿಸೋಣ ಎಂದು ಸಲಹೆ ನೀಡಿದರು.

ಕಲಕೇರಿ ಗಂಗಾ ಸ್ಟುಡಿಯೋ ಮಾಲೀಕ ಸಿದ್ದು ಪೂಜಾರಿ ಮಾತನಾಡಿ, ಛಾಯಾಚಿತ್ರೀಕರಣಕ್ಕೆ ದೊಡ್ಡ ಕಿಮ್ಮತ್ತಿದೆ ಅದನ್ನು ನಾವು ಬಳಸಿಕೊಳ್ಳುತ್ತಿಲ್ಲ ನನಗೆ ಫೋಟೋಗ್ರಾಫಿಯಿಂದಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೆಲೆ ಸಿಕ್ಕಿದೆ ಅಂದು ಫೊಟೋಗ್ರಾಫರಗಳಿಗೆ ಮದುವೆ ಮುಂಜಿವೆಗಳಲ್ಲಿ ಸ್ವಾಮೀಜಿಗಳಿಗೆ ಕೊಡುವ ಎಲ್ಲ ಗೌರವಗಳು ಸಿಗುತ್ತಿದ್ದವು ಆದರೆ ಇಂದಿನ ತಂತ್ರಜ್ಞಾನ ಭರಾಟೆಯಲ್ಲಿ ಫೊಟೋಗ್ರಾಫಿ ಎಲ್ಲರ ಡಿಜಿಟಲ್ ಮೊಬಾಯಿಲ್‍ಗಳ ಕೈಯಲ್ಲಿ ಸಿಕ್ಕು ಆ ಗೌರವ ಕಳೆದುಕೊಂಡಂತಾಗಿದೆ ಆದಾಗ್ಯೂ ಪೋಟೋಗ್ರಾಫರ ಅನುಭವದ ಮೇಲೆ ಹಾಗೂ ಅವರ ಸಾಮರ್ಥ್ಯದ ಮೇಲೆ ಆ ಗೌರವವನ್ನು ಗಿಟ್ಟಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದದಲ್ಲಿ 25ರಿಂದ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ ಹಿರಿಯ ಫೋಟೋಗ್ರಾಫರಗಳಿಗೆ ಸನ್ಮಾನಿಸಿ ಗೌರವಸಲಾಯಿತು ಅಲ್ಲದೆ ಕರೋನಾ ಸಂದರ್ಭದಲ್ಲಿ ಮೃತಪಟ್ಟ ರಫೀಕ ಸ್ಟುಡಿಯೋ ಮಾಲೀಕ ರಫೀಕ ಮಕಾಂದಾರ, ಕ್ಲಾಸಿಕ್ ಸ್ಟುಡಿಯೋ ಮಾಲೀಕ ಮೋಹನ ಬಡಿಗೇರ, ಕುಮಾರ ಸ್ಟುಡಿಯೋ ಮಾಲೀಕ ಕುಮಾರ ಹಿರೇಮಠ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.

- Advertisement -

ಸಂಘದ ಅಧ್ಯಕ್ಷ ರೂಪಸಿಂಗ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ರಿಯಾಜ ಮಸಾಲಿ, ರುಕ್ಮಾನ್ ಬಳೂಂಡಗಿ, ಶಂಕರಲಿಂಗ ಬಿರಾದಾರ, ಉಮೇಶ ಪಟ್ಟಣಶೆಟ್ಟಿ, ರಾಜು ಚಳ್ಳಗಿ, ಪುಟ್ಟು ಸಂಗಮ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಪರಶುರಾಮ ಗೂಳೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group