ಜಮೀರ ಅಹ್ಮದ ಮುಸ್ಲಿಮ್ ವಿರೋಧಿ – ಫಯಾಜ್ ಇಬ್ರಾಹಿಂ

Must Read

ಬೀದರ– ನಿಜವಾಗಿ ನೋಡಿದರೆ ಜಮೀರ ಅಹ್ಮದ ಮುಸ್ಲಿಮ್ ವಿರೋಧಿಯಾಗಿದ್ದಾರೆ ಎಂದು ಜೆಡಿಎಸ್ ನಾಯಕ ಸಿ ಎಂ ಇಬ್ರಾಹಿಂ ಪುತ್ರ ಫಯಾಜ್ ಇಬ್ರಾಹಿಂ ಹುಮನಾಬಾದ ನಲ್ಲಿ ಆರೋಪ ಮಾಡಿದರು.

ಪತ್ರಕರ್ತರೊಡನೆ ಮಾತನಾಡಿದ ಅವರು, ಜಮೀರ ಅಹ್ಮದ ಮೊದಲು ಮಂತ್ರಿಯಾಗಿದ್ದು ಜೆಡಿಎಸ ಪಕ್ಷದಿಂದ, ಈಗ  ಶಾಸಕರಾಗಿ ಕಾಂಗ್ರೆಸ್ ಪಕ್ಷದ ಜೊತೆ ಸೇರಿ ಕೊಂಡು. ಅಡ್ಡ ಮತದಾನ ಮಾಡಿ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ನಮ್ಮ ಪಕ್ಷದ ರಾಜ್ಯಸಭೆ ಗೆ ಬಿ ಎಂ ಫಾರೋಕ್ ರನ್ನು ಘೋಷಿಸಿದರು. ಆಗ ಜೆಡಿಎಸ ಶಾಸಕರಾಗಿದ್ದ ಜಮೀರ ಅಹ್ಮದ್ ಯಾಕೆ ಮುಸ್ಲಿಂ ಅಭ್ಯರ್ಥಿ ವಿರುದ್ಧ ಅಡ್ಡ ಮತದಾನ ಮಾಡಿದರು ಎಂದು ಆರೋಪಿಸಿದರು.

ಜಮೀರ ಅಹ್ಮದ್ ಮುಸ್ಲಿಂ ಸಮುದಾಯದ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮೇಲೆ ಪ್ರೀತಿ ಇದ್ದರೆ ಸರ್ವಜ್ಞ ನಗರದಲ್ಲಿ ಮುಸ್ಲಿಮ್ ಸಮುದಾಯದ  ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಷೇತ್ರವಾಗಿದೆ ಅಲ್ಲಿ ಮುಸ್ಲಿಂ ಅಭ್ಯರ್ಥಿ ಘೋಷಣೆ ಮಾಡಲಿ ನೋಡೋಣ ಎಂದು ಫಯಾಜ್ ಸವಾಲು ಹಾಕಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group