Homeಸುದ್ದಿಗಳುಬಿಜೆಪಿಗೆ ಸೇರ್ಪಡೆ

ಬಿಜೆಪಿಗೆ ಸೇರ್ಪಡೆ

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಅವರು ಕಳೇದ 2 ಅವಧಿಯ ಕಾರ್ಯಸಾಧನೆಗಳು ಕ್ಷೇತ್ರಾದ್ಯಂತ ಮನೆ ಮಾತಾಗಿದ್ದು ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಧನೆಯನ್ನು ಮೆಚ್ಚಿ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಪುರಸಭೆ ಆಶ್ರಯ ಕಮಿಟಿ ಸದಸ್ಯರಾದ ರಜಾಕ ಮುಜಾವರ ಹೇಳಿದರು.

ಪಟ್ಟಣದ ವಾರ್ಡ್ ನಂಬರ 9 ರಲ್ಲಿ  ರಮೇಶ್ ಭೂಸನೂರ ಕಾರ್ಯವನ್ನು ಮೆಚ್ಚಿ  ಆಶ್ರಯ ಕಮಿಟಿ ಸದಸ್ಯರಾದ ರಜಾಕ ಮುಜಾವರ ಹಾಗೂ ಯುವ ನಾಯಕ ಇಬ್ರಾಹಿಮ್ ಆಳಂದ ಮೆಹಬೂಬ ಅಲಿ ದೇವರಮನಿ ಹುಸೇನ್ ದಪೇದಾರ್ ರವರ ನೇತೃತ್ವದಲ್ಲಿ ಸುಮಾರು ಐವತ್ತು ಕ್ಕಿಂತ ಹೆಚ್ಚು ಜನರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಮೊದಲನೇ ಹಂತದ ಸೇರ್ಪಡೆ ಮುಂಬರುವ ದಿನಗಳಲ್ಲಿ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ಜನರು ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಬುಬಕರ ಶೇಖ್.ಮೈಬೂಬ ಆಲಮೇಲ್.ಮುಸ್ತಾಕ್ ಆಳಂದ ಯಾಸಿನ್ ವಾಲೀಕಾರ್ ಹಾಗೂ ಸದ್ದಾಂ ವಾಲೀಕಾರ ಸಮೀರ್ ಶೇಖ್. ಹಸನ್ ಬೆಕಿನಾಳ. ಟಾಕಳಿ. ಮಚ್ಚೇಂದ್ರ. ಮಾರುತಿ. ತನ್ವೀರ್ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group