ತಿಮ್ಮಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆ ; ಬಿಳಿ ಜೋಳ ಭರಪೂರ ಬರಲಿದೆ !

Must Read

ಹುನಗುಂದ- ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ರೈತರ ಪ್ರೀತಿಯ ಹಬ್ಬವಾದ ಕಾರ ಹುಣ್ಣಿಮೆಯನ್ನು ದಿನಾಂಕ:೨೨-೦೬-೨೦೨೪ ರಂದು ಶನಿವಾರ ಸಾಯಂಕಾಲ ಸಡಗರದಿಂದ ಆಚರಿಸಲಾಯಿತು.

ನಗರೀಕರಣದಿಂದ ನಮ್ಮ ಈ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತಿಮ್ಮಾಪುರ ಹುನಗುಂದ ತಾಲೂಕಿನ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನ ಹೋರಿ ಒಡಿಸುವುದು ಕರಿ ಹರಿಯುವದು ಸಂಪ್ರದಾಯ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರೂ ಇಂದಿನ ನಮ್ಮ ಗ್ರಾಮೀಣ ಸಂಸ್ಕೃತಿಗಳು ಯಾವುದೇ ಆಚರಣೆಯಿಂದ ಹಿಂದೆ ಸರಿದಿಲ್ಲ ಕಾರು ಹುಣ್ಣಿಮೆಯ ದಿನ ಗ್ರಾಮದ ಹಿರಿಯರು ಸೇರಿ ಬಾಬದ ಮನೆಗಳಾದ ರಾಟಿಯವರ ಮನೆ ಗೌಡರ ಹಳಮನೆಯವರ ಮನೆ ಹಾದಿಮನಿಯವರ ಮನೆ ಕೆಂಚನಗೌಡರ ಮನೆ ಹಾಗೂ ಪಿಂಜಾರರ ಮನೆಗಳಿಗೆ ಬಾಜಾ ಭಜಂತ್ರಿಗಳೊಂದಿಗೆ ತೆರಳಿ ಸಂಜೆ ಕರಿ ಹರಿಯುವದಕ್ಕೆ ಕರೆ ತರಲಾಯಿತು.

ಊರ ಮುಂದಿನ ಅಗಸಿಯಲ್ಲಿ ಎಲ್ಲ ಎತ್ತುಗಳನ್ನು ಒಂದೇ ಸಾರಿ ಐದು ಸುತ್ತು ಬಿಡಲಾಯಿತು ಅಗಸಿಗೆ ಅಡ್ಡಲಾಗಿ ಹಾಕಿರುವ ಬೇವಿನ ಸೊಪ್ಪಿನ ಮಧ್ಯೆ ಇರುವ ಕೊಬ್ಬರಿ ಬಟ್ಟಲನ್ನು ಯುವಕರು ಸಾಹಸ ಮಾಡಿ ಹರಿದರು ಯಾವ ಬಣ್ಣದ ಎತ್ತು ಕರೆ ಹರಿಯುತ್ತದೆಯೋ ಅದರ ಮೇಲೆ ರೈತರು ಬೆಳೆಯ ಸೂಚನೆ ನೀಡುತ್ತಾರೆ. ಐದು ಎತ್ತುಗಳಲ್ಲಿ ಬಿಳಿ ಎತ್ತು ಮೊದಲು ಬಂದ ಕಾರಣ ಬಿಳಿ ಜೋಳ ಸಂಭ್ರಮದಿಂದ ಬೆಳೆಯಲಿದೆ ಎಂದು ರೈತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕರಿ ಹರಿದ ನಂತರ ಇಲ್ಲಿಯ ಯುವಕರಿಂದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಹಸ ಮೆರೆದರು.
ಕಾರ ಹುಣ್ಣಿಮೆಯ ಬಗ್ಗೆ ಪತ್ರಕರ್ತ ಜಗದೀಶ್ ಹದ್ಲಿ ಮಾತನಾಡಿ, ಆಧುನಿಕತೆಯ ಭರಾಟೆಯ ಮಧ್ಯೆ ವಿಲಕ್ಷಣವೆನಿಸಿದರೂ ಗ್ರಾಮೀಣದ ಸೊಗಡು ಜಾನಪದ ಸಂಸ್ಕೃತಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಳಿವಿನಂಚಿನಲ್ಲಿರುವ ಈ ಸಂಸ್ಕೃತಿಗಳನ್ನು ಸರ್ಕಾರ ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Latest News

ಬಂಜಾರಾ ಸಮಾಜದ ಶ್ರೇಷ್ಠ ಸಂತ ಸೇವಾಲಾಲ ಮಹಾರಾಜ

ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ...

More Articles Like This

error: Content is protected !!
Join WhatsApp Group