- Advertisement -
ಮೂಡಲಗಿ -:ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರು, ಜಗಜ್ಜನನಿ ವಾರಪತ್ರಿಕೆಯ ಸಂಪಾದಕರು, ಸಂಘ ಪರಿವಾರದ ಮುಖಂಡರು ಹಾಗೂ ನನ್ನ ಮಾರ್ಗದರ್ಶಕರು ಆಗಿದಂತಹ ಶ್ರೀಯುತ *ಬಸವರಾಜ ಹುದ್ದಾರ* ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, ಇಡಿ ಜೀವನ ಪರ್ಯಂತ ತಮ್ಮ ಮೌಲ್ಯಗಳಿಗಾಗಿ ಹೋರಾಟ ಮಾಡಿದಂತಹ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡು ಬಿಜೆಪಿ ಮತ್ತು ಪತ್ರಿಕಾ ಬಳಗ ಅನಾಥವಾಗಿದೆ. ಮೃತರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಮತ್ತು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ