ಯುವಕರಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ನಿಷ್ಠಾವಂತ, ಸದಾ ಕ್ರಿಯಾಶೀಲರಾಗಿರುವ ಕಾರ್ಯಕರ್ತರಿಗೆ ಬಿಜೆಪಿ ಸದಾ ಮನ್ನಣೆ ನೀಡುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, ಯುವಕರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿರುವುದು ಎಲ್ಲರಿಗೂ ಹರ್ಷ ತಂದಿದೆ. ಉತ್ಸಾಹಶೀಲರನ್ನು ಮತ್ತು ಯುವಕರನ್ನು ನಮ್ಮ ರಾಷ್ಟ್ರೀಯ ನಾಯಕರು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಇದುವೇ ದೊಡ್ಡ ಸಾಕ್ಷಿ ಎಂದಿದ್ದಾರೆ.
ನಿತಿನ್ ನಬೀನ್ ಅವರಿಗೆ ಶುಭವಾಗಲೆಂದು ಹಾರೈಸುವೆ. ಜತೆಗೆ ದೇಶದ ಎಲ್ಲ ಬಿಜೆಪಿ ಕಾರ್ಯಕರ್ತರು, ಸದಸ್ಯರು ಪಕ್ಷಕ್ಕಾಗಿ ಅವರು ಕೈಗೊಳ್ಳುವ ಕಾರ್ಯಯೋಜನೆ, ವಿಚಾರಗಳಿಗೆ ಕೈಜೋಡಿಸಲು ಸದಾ ಸಿದ್ಧರಿರುತ್ತಾರೆ. ಅವರು ಪಕ್ಷವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಚತರರು ಕೂಡ ಆಗಿರುವುದರಿಂದ ಪಕ್ಷದ ಶ್ರೇಯೋಭಿವೃದ್ಧಿಗಾಗಿ ಅವರೊಂದಿಗೆ ದುಡಿಯಲು ನಾವು ಕೂಡ ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ

